ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ
ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ ನಾನು ಹೈಸ್ಕೂಲಿನ ಮೊದಲನೇ ವರ್ಷದಲ್ಲಿದಾಗ ನಮ್ಮೂರಿಗೆ ಆಗಮಿಸಿದ ಉತ್ತರಕರ್ನಾಟಕ ಮೂಲದ ಸಂಗಮೇಶ್ವರ ನಾಟ್ಯ ಕಲಾಸಂಘವು ಬಯಲುಸೀಮೆಯ ಬರಡುಭೂಮಿಗೆ ಕಲಾಗಂಗೆಯನ್ನು ಹರಿಸಿದ ಭಗೀರಥಸ್ವರೂಪದ ಉಜ್ವಲಪ್ರಯತ್ನಕ್ಕೆ ಪ್ರೇರಕರೂಪಿಯಾಗಿತ್ತು. ಆ ಹೊತ್ತು ಕಲೆಯ ವಿಷಯದಲ್ಲಿ ನಮ್ಮೂರು ಬಡತನದಿಂದ ಬಳಲುತ್ತಿತ್ತು ಎಂದೇ ಹೇಳಬೇಕು. ಆರ್ಥಿಕವಾಗಿ ಸಬಲವಲ್ಲದ ಊರೊಂದು ಸಾಂಸ್ಕೃತಿಕವಾಗಿ ಶ್ರೀಮಂತ ಎಂದು ಕರೆಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ನಾನು ಭಾವಿಸುತ್ತೇನೆ. ಹೊಟ್ಟೆ ತುಂಬಾ ಉಂಡು, ಮೈತುಂಬಾ ಬಟ್ಟೆ ಹೊದ್ದುಕೊಂಡ ತರುವಾಯವೆ ಮನುಷ್ಯಜೀವ ಕಲೆಯ ನೆಲೆಯೊಂದನ್ನು…