ಶ್ರೇಯಾಂಸಿ ಬಹುವಿಘ್ನಾನಿ
ಸಿದ್ಧಸೂಕ್ತಿ: ಶ್ರೇಯಾಂಸಿ ಬಹುವಿಘ್ನಾನಿ. ಒಳ್ಳೆಯದಕ್ಕೆ ಲೆಕ್ಕವಿಲ್ಲದ ತೊಡಕು. ಬಾರ್ ರೆಸ್ಟೋರೆಂಟ್ ತೆರೆಯಲು ಬಲು ಕಷ್ಟವಿಲ್ಲ, ಅವು ಸೊರಗುವುದೂ ಇಲ್ಲ. ಒಂದರ ನಂತರ ಮತ್ತೊಂದು! ಆಶ್ರಮ ಮಠ ಮಂದಿರ ಕಟ್ಟಿ ನೋಡಿ! ಪ್ರಾಯದಲ್ಲಿ ಪ್ರಾರಂಭಿಸಿದವ ಸತ್ತರೂ ಮುಗಿಯದು! ಕುಂಟುತ್ತ ಸೊರಗುತ್ತ ತೆವಳುವುದು! ಉಚಿತ ಶಾಲೆ ವಿದ್ಯಾರ್ಥಿನಿಲಯಕ್ಕೆ ನೆಲವೇ ಗತಿ! ಭರ್ಜರಿ ಶುಲ್ಕ ಪಡೆವ ಕಟ್ಟಡ ಗಗನಚುಂಬಿ! ಋಷಿ ಯಜ್ಞ ಮಾಡಿದ! ರಾಕ್ಷಸ ರಕ್ತಮಾಂಸ ಸುರಿದ! ವಿಶ್ವಾಮಿತ್ರನ ತಪಸ್ಸಿಗೆ ಮೇನಕೆ ಅಡ್ಡಿ! ಹೇಗಾದರೂ ಮಾಡಿ ಒಳ್ಳೆಯದನ್ನು ಕೆಡಿಸಬೇಕೆಂಬ ಛಲ…