ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ
ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ ದುರ್ಗಾ- ಮಹಿಷ ಕದನ ಮತ್ತು ಮಹಿಷಾಸುರ ಮರ್ದನದ ಪರಿಣಾಮ ಇದ್ದೀತು. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿಯಿದು. ಪರಮ ಕ್ರೌರ್ಯಕ್ಕೆ ಗುರಿಯಾಗುವ ಜೀವಿ. ಮನಸೇಚ್ಛೆ ಬಡಿತ ತಿನ್ನುತ್ತದೆ, ದೇವಿಯ ಮುಂದೆ ಕತ್ತು ಕಡಿಸಿಕೊಂಡು ಬಲಿಯಾಗುತ್ತದೆ. ಮೇವು ನೀರಿಲ್ಲದೆ ನೂರಾರು ಕಿ.ಮೀ. ದೂರ ಹಿಂಸೆಯ ಸಾಗಣೆಗೆ ತುತ್ತಾಗಿ ಕಸಾಯಿ ಖಾನೆಗಳಲ್ಲಿ ಅತ್ಯಂತ ಯಾತನೆಯ ಮರಣಕ್ಕೆ ಗುರಿಯಾಗುತ್ತದೆ. ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ…