ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ
ಸಿದ್ಧಸೂಕ್ತಿ: *ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ* ಮಲಗಿರುವ ಸಿಂಹದ ಬಾಯಿಗೆ ಪ್ರಾಣಿ ಬಂದು ಆಹಾರವಾಗುವುದಿಲ್ಲ. ಸಿಂಹ ಹುಲಿ ಆನೆ ಕರಡಿ ಚಿರತೆಯೇ ಆಗಿರಲಿ ಬೇಟೆಯಾಡಿದರೆ ಮಾತ್ರ ಆಹಾರ! ಶ್ರೀಮಂತನೆಂದು ನಿದ್ರಿಸಿದರೆ ? ನಾ ಬಡವ, ನನ್ನ ಹಣೆಬರಹವೇ ಇಷ್ಟೆಂದು ಕುಳಿತರೆ ? ಶ್ರೀಮಂತ ದರಿದ್ರನಾಗುವನು! ಶ್ರೀಮಂತಿಕೆಯ ಮೂಲವನ್ನು ಹುಡುಕಿರಿ! ಅದೇ ಧೈರ್ಯ ಪರಿಶ್ರಮ! ಬಡತನದ ಇತಿಹಾಸವನ್ನು ಕೆಣಕಿರಿ! ಅದೇ ಅಧೈರ್ಯ ಅಜ್ಞಾನ ದಾಸ್ಯ ನಿರ್ಲಕ್ಷ್ಯ ಸೋಮಾರಿತನ! ಮೈ ಕೊಡವಿ ಪುಟಿದೇಳಿ! ಕೀಳರಿಮೆ ತೊರೆಯಿರಿ! ಪ್ರತಿ…