Girl in a jacket

Daily Archives: October 23, 2021

ಹಾನಗಲ್ ಜೆಡಿಎಸ್ ಅಭ್ಯರ್ಥಿಯನ್ನು ಲಘುವಾಗಿ ಪರಿಣಿಸಬೇಡಿ;ಎಚ್ ಡಿ ಕೆ

ಹಾನಗಲ್ಅ,23: ಈ ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಲಘುವಾಗಿ ಪರಿಗಣಿಸುವ ಅಗತ್ಯವಿಲ್ಲ. ಒಂದು ವೇಳೆ ಅವರು ಹಾಗೇನಾದರೂ ಭಾವಿಸಿದರೆ ಫಲಿತಾಂಸದ ದಿನ ಅವರಿಗೆ ನಿರಾಶೆ ಕಟ್ಟಿಟ್ಟಬುತ್ತಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಿದರು. ಹಾನಗಲ್ ಕ್ಷೇತ್ರದಲ್ಲಿಂದು ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಅವರ ಪರ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ರಾಷ್ಟ್ರೀಯ ಪಕ್ಷಗಳು ಅಬ್ಬರ-ಆರ್ಭಟದಿಂದ ಪ್ರಚಾರ ಕೈಗೊಂಡಿವೆ. ಆದರೆ, ನಾವು ಜನರ ನಾಡಿಮಿತ…

ಸಿದ್ದು ಟೀಕೆಗೆ ಬೊಮ್ಮಾಯಿ ಅನುದಾನದ ರಿಪೋರ್ಟ್ ಕಾರ್ಡ್ ಪ್ಲೇ

ಹಾನಗಲ್,ಅ,23:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾನಗಲ್ ಗೆ ಏನ್ ಮಾಡಿದ್ದಾರೆ ಎಂದು ನೀಡಿದ್ದ ಹೇಳಿಕೆಗೆ ಬೊಮ್ಮಾಯಿ ಅನುದಾನದ ರಿಪೋರ್ಟ್ ಕಾರ್ಡ್ ಪ್ಲೇ ಬಿಡುಗಡೆಮಾಡಿದರು. ಹಾನಗಲ್ ತಾಲೂಕಿನ ೩೮೪೩೩ ರೈತರಿಗೆ ತಲಾ ರೂ.೧೦೦೦೦ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ೧೨೦೦೦ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ. ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಲ್ಲಿ ೬೬,೦೦೦ ಉಚಿತವಾಗಿ ಪಡಿತರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ರೂ.೪೨ ಕೋಟಿ ನೀಡಲಾಗಿದೆ ಹೂವು ಮಾರುವ ೬೪೬೨ ಜನರಿಗೆ ತಾಲಾ ರೂ.೧೦,೦೦೦ ನೀಡಲಾಗಿದೆ, ಹಣ್ಣು ಮಾರುವ ೧೯೮೦ ಜನರಿಗೆ…

ವಿಎಚ್ ಪಿ ಕತ್ತಿ ಹೇಳಿಕೆ ಸಿಎಂ ವಿರುದ್ಧ ಕಾಂಗ್ರಸ್ ಕಿಡಿ

ಬೆಂಗಳೂರು,ಅ,23: ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರುವುದಿಲ್ಲ  ಎಂಬ ವಿಎಚ್‌ಪಿ ಮುಖಂಡರ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಡಿಸಿದೆ. ತುಮಕೂರಿನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ನ ರಾಜ್ಯ ಸಂಚಾಲಕ ಬಸವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಟ್ವಿಟರ್‌ನಲ್ಲಿ  ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.ಮುಖ್ಯಮಂತ್ರಿಗಳ ‘ಆಕ್ಷನ್’ಗೆ ಬಿಜೆಪಿಯ ಸಮಾಜಘಾತುಕ ಪಡೆಯ ‘ರಿಯಾಕ್ಷನ್’ ಹೆಚ್ಚುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ. ‘ಸರ್ಕಾರಕ್ಕೆ ಈ ಸಮಾಜ ವಿರೋಧಿ ಸಂಘಟನೆಗಳ ನಿಯಂತ್ರಣ…

ಮೂರು ಗ್ರಾಮಗಳ ಜನರಿಗೆ ಹಕ್ಕು ಪತ್ರ ನೀಡಿ ಪುನರ್ ವಸತಿ ಕಲ್ಪಿಸಲಾಗಿದೆ: ಶಶಿಕಲಾ ಜೊಲ್ಲೆ

ಸಿಂಧಗಿ,ಅ,23: ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ, ತಾವರಖೆಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಪಕ್ಷದ ಅಭ್ಯರ್ಥಿ ರಮೇಶ ಬೂಸನೂರು ಪರವಾಗಿ ಮತಯಾಚನೆ ಮಾಡಿದ ಅವರು, ಭೀಮಾ ಏತನೀರಾವರಿಯಿಂದ ತಾರಾಪುರ, ಬ್ಯಾಡಗಿಹಾಳ ಹಾಗೂ ತಾವರಖೇಡ ಗ್ರಾಮಗಳು ಮುಳುಗಡೆಯಾಗಿ ಪುನರ್ವಸತಿಗಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ…

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳ ಅನುದಾನ- ಸಿ.ಎಂ

ಹುಬ್ಬಳ್ಳಿ ಅ,23:ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವರ್ಷದಲ್ಲಿ 50 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಇಂದು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು 2011 ರಲ್ಲಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಪ್ರಾರಂಭಿಸಲಾಯಿತು. ಕಿತ್ತೂರು ಚನ್ನಮ್ಮ ಪ್ರತಿಮೆಯನ್ನು ಬೆಳಗಾವಿಯ ನಗರದ ಕೇಂದ್ರ ಭಾಗದಲ್ಲಿ ಸ್ಥಾಪಿಸುವಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ…

ಪಠತ ಸಂಸ್ಕೃತಂ ವದತ ಸಂಸ್ಕೃತಂ

                         ಸಿದ್ಧ ಸೂಕ್ತಿ:               ಪಠತ ಸಂಸ್ಕೃತಂ ವದತ ಸಂಸ್ಕೃತಂ ಸಂಸ್ಕೃತವನ್ನು ಓದಿರಿ, ಓದಿಸಿರಿ ಮಾತಾಡಿರಿ. ವೇದ ಶಾಸ್ತ್ರ ಕಾವ್ಯ ಪುರಾಣಗಳ, ಸಂಪದ್ಭರಿತ ಸುಸಂಸ್ಕೃತಿಯ ನಿಧಿ ಸಂಸ್ಕೃತ. ಮಾತೃದೇವೋ ಭವ, ಪಿತೃದೇವೋ ಭವ ಇದು ವೇದವಾಣಿ. ಸಂತೋಷ ಸಂಭ್ರಮ ನೀತಿ ಸದಾಚಾರ ಆಧ್ಯಾತ್ಮವಿಲ್ಲದ ಬದುಕು, ರಾಮನಿಲ್ಲದ ಅಯೋಧ್ಯೆ, ಕತ್ತಲೆಯ ಗೂಡು, ಆತ್ಮನಿಲ್ಲದ ದೇಹ!…

Girl in a jacket