Girl in a jacket

Daily Archives: October 21, 2021

ಕೆಆರ್ ಎಸ್ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಅಧಿಕಾರಿ ಕಥೆಯನ್ನು ಬಯಲು ಮಾಡಬೇಕಾಗುತ್ತೆ; ಎಚ್ ಡಿಕೆ ಬಿಜೆಪಿಗೆ ಎಚ್ಚರಿಕೆ

ಸಿಂಧಗಿ,ಅ,21: ಬಿಜೆಪಿಯವರು ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಆರ್ ಎಸ್ ಎಸ್ ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯವನ್ನು ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು. ಸಿಂಧಗಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಇಂದು ಮಾಧ್ಯಮಗಳ ಜತೆ ಅವರು ಮಾತನಾಡಿದ. ಅವರುಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಾನು ಆರ್ ಎಸ್ ಎಸ್ ಬಗ್ಗೆ…

ನ 1ರಿಂದ ಟಾಟಾ ಸಹಯೋಗದಲ್ಲಿ ಆಧುನಿಕ ಕೋರ್ಸ್ ಗಳ ತರಬೇತಿ ಆರಂಭ: ಅಶ್ವತ್ಥ ನಾರಾಯಣ

ಬೆಂಗಳೂರು,ಅ,21: ‘ಉದ್ಯೋಗ’ ಕಾರ್ಯಕ್ರಮದಡಿ ಟಾಟಾ ಕಂಪನಿಯ ಸಹಯೋಗದಲ್ಲಿ ರೂ 4,636 ಕೋಟಿ  ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 150 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಟಿ) ಇನ್ನೆರಡು ವಾರದಲ್ಲಿ ಉದ್ಘಾಟನೆಯಾಗಲಿದ್ದು, ಆಧುನಿಕ ಕೋರ್ಸ್ ಗಳನ್ನು ಒಳಗೊಂಡ ತರಬೇತಿಯು ಈ ಕೇಂದ್ರಗಳಲ್ಲಿ ನ.1ರಿಂದ ಆರಂಭವಾಗಲಿದೆ ಎಂದು ಕೌಶಾಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗುರುವಾರ ಹೇಳಿದರು. ಇಲ್ಲಿನ ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರವನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು…

ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ:ರಸ್ತೆಯ ತುರ್ತು ರಿಪೇರಿಗೆ ಸಚಿವ ಸಿ.ಸಿ.ಪಾಟೀಲ ಸೂಚನೆ

ಬೆಂಗಳೂರು,ಅ,21:ಮೈಸೂರಿನ ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಗೀಡಾಗಿರುವುದರಿಂದ ಅಲ್ಲಿ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬೇಕು ಮತ್ತು ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟು ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು  ಅಧಿಕಾರಿಗಳಿಗೆ  ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರು ಸೂಚಸಿದ್ದಾರೆ. ಮೈಸೂರಿನ ಈ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಈ ಭೂಕುಸಿತ ಸಂಭವಿಸಿದೆ. ಈ ಬಗ್ಗೆ ತಾಂತ್ರಿಕ ವರದಿಯನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ…

2020ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ವಿದೇಶಿಹೂಡಿಕೆಗೆ ದುಬೈ ಭೇಟಿ ನೆರವು: ನಿರಾಣಿ

ಬೆಂಗಳೂರು,ಅ.21-‘ದುಬೈ ಎಕ್ಸ್ ಪೋ 2020’ಭೇಟಿಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ರಾಜ್ಯದಲ್ಲಿ ಅನೇಕ ಪ್ರತಿಷ್ಠಿತ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಉದ್ಯೋಗ ಅವಕಾಶಗಳು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್‌. ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೂರು ದಿನಗಳಲ್ಲಿ ಕಾಲ ನಡೆದ ದುಬೈ ಎಕ್ಸ್ ಪೋ ದಲ್ಲಿ ಐಟಿಬಿಟಿ ಸಚಿವ ಡಾ. ಅಶ್ವಥ್ ನಾರಾಯಣ, ದುಬೈ-ಭಾರತೀಯ ಕೌನ್ಸಿಲರ್ ಡಾ. ಅಮನ್ ಪುರಿ, ಹೆಚ್ಚುವರಿ ಮುಖ್ಯ…

ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ;ಎಚ್,ಡಿ.ಕೆ

ವಿಜಯಪುರ,ಅ,21: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಸಿಂದಗಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಅಲ್ಪಸಂಖ್ಯಾತರರನ್ನು ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ಒಂದೆಡೆ ಮುಸ್ಲೀಮರನ್ನು ದೇಶದಿಂದಲೇ ಓಡಿಸಬೇಕು ಎಂದು ಎನ್ನುವ ಬಿಜೆಪಿ, ಇನ್ನೊಂದೆಡೆ ಅವರಿಗೆ ನಾವೂ ಸಹಾಯ ಮಾಡಿದ್ದೇವೆ. ನಮಗೆ ವೋಟು ಕೊಡಬೇಕು ಎಂದು ಕೇಳುತ್ತಿದೆ. ದ್ವಿಮುಖ ನೀತಿ…

ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಹೇಳಿಕೆಗೆ ಸಿದ್ದು ಆಕ್ರೋಶ

ಹಾನಗಲ್,ಅ,21:ರಮೇಶ್ ಕುಮಾರ್ ನ ಜೈಲಿಗೆ ಕಳಿಸುವೆ‌ ಎನ್ನುವ ಸುಧಾಕರ್ ಹೇಳಿಕೆ  ಬಗ್ಗೆ ತೀವ್ರವಾಗಿ ತರಾಟಗೆ ತಗೆದುಕೊಂಡ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದುಡ್ಡಿನ ಅಧಿಕಾರದ ಮದ ಇಂಥಹ ದುರಹಂಕಾರದ ವ್ಯಕ್ತಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು. ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು,ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ‌ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ.‌ ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದುಎಂದು ಕಿಡಿಕಾರಿದರು ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ ಅವಹೇಳನಕಾರಿ…

ಪೊಲೀಸ್ ಸಂಸ್ಮರಣಾ ದಿನಾಚರಣೆ: ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ

ಹುಬ್ಬಳ್ಳಿ, ಅ, 21- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಗೌರವ ಅರ್ಪಣೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ವಿಧಾನ‌ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ ರೆಡ್ಡಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ…

Girl in a jacket