Girl in a jacket

Daily Archives: October 20, 2021

‘ಓ ಮೈ ಲವ್’ ಚಿತ್ರಕ್ಕೆ ಏನಾಯ್ತೋ ಕಾಣೆ ಹಾಡಿನ ಚಿತ್ರೀಕರಣ

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓ ಮೈ ಲವ್ ಚಿತ್ರಕ್ಕೆ ಕಳೆದ ವಾರ ವಿ. ನಾಗೇಂದ್ರ ಪ್ರಸಾದ್ ರಚಿಸಿದ “ ಏನಾಯ್ತೋ ಕಾಣೆ.. ಏನಾಯ್ತೋ ಕಾಣೆ ತಂಗಾಳಿ ಸುರಿದಂತೆ ತಂಪಾದೆ ನಾನೆ….” ಹಾಡನ್ನು ವಿ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ, ದೀಪಿಕಾ ಆರಾದ್ಯ ,ಅಕ್ಷತಾ ,ಶೌರ್ಯ. ಸುವೇದ್ ಅಭಿನಯಿಸಿದಈ ಹಾಡನ್ನು ಯಲಹಂಕದ ನಿಟ್ಟಿ ಮೀನಾಕ್ಷಿ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣದೊಂದಿಗೆ ಸುಮಾರ್…

ರಾಜ್ಯೋತ್ಸವ ಮೆರವಣಿಗೆ ಬಗ್ಗೆ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ: ಸಿ.ಎಂ

ಬೆಳಗಾವಿ, ಅ, 20:lರಾಜ್ಯೋತ್ಸವ ಮೆರವಣಿಗೆ ಬಗ್ಗೆ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ಅದ್ದೂರಿ ಮೆರವಣಿಗೆಗೆ ಅವಕಾಶ ನೀಡಲು ಕನ್ನಡಪರ ಹೋರಾಟಗಾರರು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಮೆರವಣಿಗೆಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಹಾನಗಲ್ ನಲ್ಲಿ ಮೂರು ದಿನಗಳ ಪ್ರಚಾರ ಕಾರ್ಯಕ್ಕಾಗಿ ಬೆಳಗಾವಿಗೆ ಆಗಮಿಸಿದ್ದು, ಅಕ್ಟೋಬರ್ 23 ರಂದು ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುನಃ…

ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್

ಸಿದ್ಧಸೂಕ್ತಿ : ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್. ಕ್ಷಣ ಕ್ಷಣವೂ ವಿದ್ಯೆಗಳಿಸಬೇಕು. ಕಣಕಣವಾಗಿ ಸಂಪತ್ತುಗಳಿಸಬೇಕು. ಕ್ಷಣದಿಂದ ನಿಮಿಷ ಘಂಟೆ ದಿನ ಮಾಸ ವರ್ಷದಾಯು:! ಕಣ ಪೈಸೆಯಿಂದ ರೂಪಾಯಿ ನೂರು ಸಾವಿರ ಲಕ್ಷ ಕೋಟಿ! ಕ್ಷಣ ಕ್ಷಣ ಕಳೆದರೆ ಮುಗಿಯಿತು ಕಾಲ! ಕಣ ಕಣ ಕಳೆದರೆ ಖಾಲಿ ಖಜಾನೆ!! ಹನಿ ಹನಿ ಹಳ್ಳ! ತೆನೆ ತೆನೆ ಭಳ್ಳ! ಸಣ್ಣದೇ ದೊಡ್ಡದಾಗುವುದು! ಅದ್ಭುತಸಾಧನೆ ಕ್ಷಣಾರ್ಧದಲ್ಲಿ ಘಟಿಸದು! ಸಣ್ಣ ಸಣ್ಣ ನಿರಂತರ ಸಾಧನೆಗಳಿಂದ ಮಾತ್ರ!! ಕ್ಷಣ ಕ್ಷಣ ಜ್ಞಾನವ ಗಳಿಸೋಣ, ಕಣ…

Girl in a jacket