ಆಲಮಟ್ಟಿ ಡ್ಯಾಂ ಅಂತರಜಲಾಶಯದ ನೀರು ಮರುಹಂಚಿಕೆಗೆ ಒತ್ತಾಯ
ಆಲಮಟ್ಟಿ,ಅ,18: ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಜಲಾಶಯವನ್ನು ಎತ್ತರಿಸುವದು, ಅಂತರಜಲಾಶಯದ ನೀರನ್ನು ಮರುಹಂಚಿಕೆ ಹಾಗೂ ಜನ-ಜಾನುವಾರುಗಳಿಗಾಗಿ ಕಾಲುವೆಗಳ ಮೂಲಕ ನೀರು ಹರಿಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತಸಂಘದವತಿಯಿಂದ ಮುಖ್ಯ ಅಭಿಯಂತರರಿಗೆ ಎರಡು ಪ್ರತ್ಯೇಕ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬರಗಾಲ ಪೀಡಿತ ಜಿಲ್ಲೆಯ ನೀರಾವರಿಗಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಿಸಿದ್ದರೂ ಜಿಲ್ಲೆಯ ಭೂಮಿಗೆ ನೀರುಣಿಸಲು ಸ್ಕೀಂ.ಗಳ ಹೆಸರಿನಲ್ಲಿ ವಂಚನೆ ಮಾಡಲಾಗುತ್ತದೆ. ಅವಳಿ ಜಲಾಶಯ ನಿರ್ಮಾಣಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ…