Girl in a jacket

Daily Archives: October 8, 2021

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್ ರಾಜಕುಮಾರ್ ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಹಾಗೂ ನಾಯಕ ನಾಯಕಿಯರು ಮೊದಲ ಬಾರಿಗೆ ಗ್ರಾಮ್ಯ ಭಾಷೆಯನ್ನು ಬಳಸಿದ ಕಪ್ಪು-ಬಿಳುಪು, ಸಾಮಾಜಿಕ ಚಿತ್ರ ಅಣ್ಣತಂಗಿ ೧೯೫೮ರಲ್ಲಿ ಗಿರಿಜಾ ಪ್ರೊಡಕ್ಷನ್ಸ್ ಲಾಂಛನದಡಿ ಬಿಡುಗಡೆಗೊಂಡಿತು. ಟಿ.ಎಸ್.ಕರಿಬಸಯ್ಯ ನಿರ್ಮಾಣ ಮಾಡಿದ ಚಿತ್ರವನ್ನು ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದರು. ಕಂದಗಲ್ ವೀರಣ್ಣ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ಈಶ್ವರಪ್ಪ, ಕೆ.ಎಸ್.ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಗಣಪತಿಭಟ್, ಆರ್.ಎನ್.ಮಾಗಡಿ, ವಾಸುದೇವ ಗಿರಿಮಾಜಿ, ಗುಗ್ಗು, ಬಿ.ಜಯಮ್ಮ, ಬಿ.ಸರೋಜಾದೇವಿ, ವಿದ್ಯಾವತಿ, ಲಕ್ಷ್ಮೀದೇವಿ ಅಭಿನಯಿಸಿದರು. ತಮಿಳಿನ…

ಜೋಡೆತ್ತು ಮಾಡೀತೆ ಕಸರತ್ತು?

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಸರತ್ತನ್ನು ಜಾತ್ಯತೀತ ಜನತಾ ದಳ ಈಗಾಗಲೇ ಆರಂಭಿಸಿದೆ. ಚುನಾವಣೆಗೆ ಎರಡು ವರ್ಷ ಇರುವಾಗಲೇ ತಾನು ಸಾಗಲಿರುವ ದಾರಿಯ ಸೂಚನೆಯನ್ನು ಅದು ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ನೆಪದಲ್ಲಿ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅದರ ತೀರ್ಮಾನ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವ ತಂತ್ರವಾಗಿ ಜೆಡಿಎಸ್ ನಾಯಕತ್ವ ಈ ಹೆಜ್ಜೆ ಇಟ್ಟಿದೆ. ಜೋಡೆತ್ತು ಮಾಡೀತೆ ಕಸರತ್ತು? ಕರ್ನಾಟಕ ವಿಧಾನ ಸಭೆಗೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ… ಬಾಲ್ಯಕ್ಕೆ ಸಂಭ್ರಮದ ನೂರು ನೆನಪುಗಳಿರುವಂತೆಯೇ ಭಯದ ಹಲವು ಕರಿನೆರಳುಗಳೂ ಇರುತ್ತವೆ.ಮನೆ ಸುತ್ತಲ ದೆವ್ವದ ಮರ.ಓಣಿ ಆಚೆಗಿನ ಹಾಳು ಮನೆ,ಊರ ತುದಿಯ ಸ್ಮಶಾನದ ಗೋರಿಗಳು ಮಕ್ಕಳಿಗೆ ಭಯದ ತಾಣಗಳೂ ಹೌದು.ಇದಕ್ಕೆ ಕಾರಣ ಅಜ್ಜನೋ ಅಜ್ಜಿಯೋ ರಾತ್ರಿಗಳಲ್ಲಿ ಹೇಳುತಿದ್ದ ದೆವ್ವ ಬ್ರಹ್ಮ ರಾಕ್ಷಸರ ಹಲವು ಕಥೆಗಳೇ! ಕಟ್ಟೆಮೇಲೆ ಕುಳಿತ ರಾಟಿ ಮಾವ ಹೇಳುತಿದ್ದ ” ಅಮವಾಸೆ ದಿನ ಚಳ್ಳಿ ಮರದ ದುರ್ಗಮ್ಮನ ಬೇವಿನ ಮರದ ದೆವ್ವ ಜೋಕಾಲಿ ಆಡೋದನ್ನ ನೋಡಿ ಓಡುತ್ತಲೇ ಕಲ್ಲೆಸೆದಾಗ ಅದು…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಹಿಂದಿನ ಸಂಚಿಕೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು ಕೊಪ್ಪಳವು ಪ್ರಾಚೀನ ಕಾಲದಲ್ಲಿ ಮಹಾಕೊಪಣಾಚಲವಾಗಿದ್ದು, ಇದು ಜೈನರ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿದ್ದಿತು. ಇಲ್ಲಿ ಅನೇಕ ಬಸದಿಗಳು ನೂರಾರು ಶಾಸನಗಳು ಕಂಡುಬಂದಿವೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೊಪ್ಪಳದಲ್ಲಿ ೭೭೨ ಜೈನ ಬಸದಿಗಳಿದ್ದವೆಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಶಾಸನಗಳಲ್ಲಿ ಜಿನಬಸದಿಗಳ ಉಲ್ಲೇಖವಿದ್ದು ಅವುಗಳಲ್ಲಿ ಜಯಧೀರ ಜಿನಾಲಯ, ಪುಷ್ಪದಂತ ತೀರ್ಥಂಕರ ಸೌಧ, ಕುಶ ಜಿನಾಲಯ, ಸಾಂತಲದೇವಿ, ಚಂದ್ರನಾಥ, ನೇಮಿನಾಥ, ಶಾಂತಿನಾಥ, ಕಲ್ಯಾಣಕೀರ್ತಿ,…

ಕಲಿತ ಶಾಲೆಯನ್ನು ಗೌರವಿಸಿದರೆ ಬದುಕಲ್ಲಿಯಶಸ್ಸು ಸಾಧ್ಯ

ಆಲಮಟ್ಟಿ,ಅ,08;ವಿದ್ಯಾರ್ಥಿಗಳು ತಂದೆ, ತಾಯಿ, ಕಲಿಸಿದ ಗುರು ಹಾಗೂ ಕಲಿತ ಸಂಸ್ಥೆಯನ್ನು ಮರೆಯದೇ ಗೌರವಿಸುವ ವಿದ್ಯಾರ್ಥಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು. ಶುಕ್ರವಾರ, ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದುಕಿನ ಓದಿನ,ಬುನಾದಿ ಪ್ರೌಢ ಹಂತ, ಈ ಹಂತದಲ್ಲಿ ಜವಾಬ್ದಾರಿಯುತ ಓದಿನ ಜತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಹುಡುಗಾಟದ ಜತೆಗೂ ಗಂಭೀರ…

Girl in a jacket