ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಡಾ.ಕಾಂತರಾಜ್ ಆಯೋಗದ ವರದಿ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಅದನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸುವ ಕೆಲಸವನ್ನು ಆಯೋಗದ ಅಧ್ಯಕ್ಷರು ಆಗ ಮಾಡಲಿಲ್ಲ. ವರದಿಯಲ್ಲಿರುವ ಶಿಫಾರಸುಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಟ್ಲೆ ದಾಖಲಾಗಿರುವುದರಿಂದ ಅದು ಇತ್ಯರ್ಥವಾಗುವರೆಗೆ ಕಾಯಬೇಕಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ ಜಾತಿ ಸಮೀಕ್ಷೆ ಆಗಬೇಕೆಂಬ ಆಗ್ರಹಕ್ಕೆ ಬಹುದೊಡ್ಡ ಬೆಂಬಲ ದೇಶವ್ಯಾಪಿ ವ್ಯಕ್ತವಾಗುತ್ತಿದೆ. ಕರ್ನಾಟಕ…