Girl in a jacket

Daily Archives: September 28, 2021

ಸಿಂದಗಿ,ಹಾನಗಲ್ ಕ್ಷೇತ್ರದ ಉಪಚುನಾವಣೆ ಘೋಷಣೆ

ಬೆಂಗಳೂರು,ಸೆ,28: ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 30 ರಂದು ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವಂಬರ್ 2 ರಂದು ಮತ ಎಣಿಕೆ ನಡೆಯಲಿದೆ. ಹಾನಗಲ್ ಕ್ಷೇತ್ರವನ್ನು ಬಿಜೆಪಿ ಶಾಸಕ ಸಿ.ಎಂ. ಉದಾಸಿ ಪ್ರತಿನಿಧಿಸುತ್ತಿದ್ದರು. ಸಿಂದಗಿ ಕ್ಷೇತ್ರವನ್ನು ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಪ್ರತಿನಿಧಿಸುತ್ತಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಹಾನಗಲ್ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಡಳಿತ ಪಕ್ಷ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು, ಉದಾಸಿ ಅವರ ಪುತ್ರ ಸಂಸದರಾದ…

ಹಾನಗಲ್, ಸಿಂಧಗಿ ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ: ಹೆಚ್.ಡಿ.ಕುಮಾರಸ್ವಾಮಿ 

ಬೆಂಗಳೂರು,ಸೆ,28: ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕಟಿಸಿದರು. ಎರಡೂ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ ಕೂಡಲೇ ಬಿಡದಿಯ ತಮ್ಮ ತೋಟದ ಮಾಧ್ಯಮಗಳ ಜತೆ ಮಾತನಾಡಿದರು. ಸಿಂಧಗಿ ಹಾಗೂ ಹಾನಗಲ್ ನಲ್ಲಿ ಶಾಸಕರ ಅಕಾಲಿಕ ಮರಣ ಹೊಂದಿದ್ದರು. ಈ ಕಾರಣಕ್ಕಾಗಿ ಇದೀಗ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಜೆಡಿಎಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.…

ಪ್ರಸಾದ

ಸಿದ್ಧಸೂಕ್ತಿ : ಪ್ರಸಾದ. ದೇವರಿಗೆ ನೈವೇದ್ಯ ಮಾಡಿ ಸ್ವೀಕರಿಸುವ, ಗುರು ಹಿರಿಯ ಅರ್ಚಕ ನೀಡುವ, ಹೂ ಹಣ್ಣು ಕಾಯಿ ಅನ್ನ ಪ್ರಸಾದ. ದೇವಸ್ಥಾನ ಮಠ ಮಂದಿರಾದಿಗಳಲ್ಲಿನ ಶುದ್ಧ ತ್ಯಾಗ ಭಾವದಿಂದ ಮಾಡುವ, ಭಿಕ್ಷಾಟಣೆಯಿಂದ ಸಂಗ್ರಹಿಸಿದ ದಾಸೋಹ ಭೋಜನ.ಭಗವಂತನ, ಗುರು ಹಿರಿಯರ ಅನುಗ್ರಹದಿಂದ ಪ್ರಾಪ್ತವಾದುದನ್ನು ಅವರಿಗರ್ಪಿಸಿ ಅವರ ಸ್ಮರಣೆಯೊಂದಿಗೆ ಸೇವಿಸುವ ಪ್ರಸಾದದಿಂದ ಶರೀರ ಪವಿತ್ರ! ಮನಸ್ಸು ಪ್ರಸನ್ನ! ಇದು ಸರ್ವದುಃಖಗಳನ್ನೂ ನಾಶಗೊಳಿಸುವುದು. “ನೈವೇದ್ಯ ಮಾಡದೇ, ಪರರಿಗೆ ಅರ್ಪಿಸದೇ ತನಗಾಗಿ ಬೇಯಿಸಿಕೊಂಡು ಉಣ್ಣುವವ ಪಾಪ ಉಂಡಂತೆ, ಅವನು ಕಳ್ಳ!”…

Girl in a jacket