ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಒಡಂಬಡಿಕೆ
ಬೆಂಗಳೂರು,ಸೆ.23:ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಸ್ಮಾರ್ಟ್ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಈ ನಿಟ್ಟಿನಲ್ಲಿ ಹೆಕ್ಸಾಗಾನ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಟಲಿಜೆನ್ಸ್ ಇಂಡಿಯಾ ಕಂಪೆನಿ ಜೊತೆ ಕೃಷಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ವಿಕಾಸಸೌಧದ ಸಭಾಂಗಣದಲ್ಲಿ ಹೆಕ್ಸಗಾನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಇಟ್ಟಿದ್ದು, ದೇಶದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿರುವ…