ಟಿ-೨೦ ನಾಯಕತ್ವ ತ್ಯಜಿಸಿದ ವಿರಾಟ್, ರೋಹಿತ್ ಆಗ್ತಾರಾ ನೂತನ ಸಾರಥಿ..?
Reported By: H.D. Savita ಭಾರತೀಯ ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ , ಈಗ ಟಿ-20 ಮಾದರಿಯಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ನಿರ್ಧರಿಸಿದ್ದಾರೆ. ಮುಂದಿನ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ನಂತರ ಕೊಹ್ಲಿ ಈ ರೂಪದಲ್ಲಿ ಈ ಜವಾಬ್ದಾರಿಯನ್ನು ತ್ಯಜಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಂಜೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ‘ನಾಯಕನಾಗಿ ಮತ್ತು ಆಟಗಾರನಾಗಿ ತಂಡಕ್ಕೆ ನನ್ನೆಲ್ಲ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ.…