ವಿಶೇಷತೆಗಳ ಗುಚ್ಚ `ತ್ರಿವೇದಂ’
ಹೊಸಬರ ತ್ರಿವೇದಂ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು…