ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ
ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ ಹಂಪೆಯ ಬಜಾರುಗಳ ಅಧ್ಯಯನ ಸಂದರ್ಭದಲ್ಲಿ ವಿಜಯನಗರ ರಾಜಧಾನಿ ಪಟ್ಟಣವನ್ನು ಕುರಿತು ವಿದೇಶಿ ಪ್ರವಾಸಿಗರ ವರದಿ ಮತ್ತು ಶಾಸನಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳುವ ಸಂದರ್ಭ ಅನಿವಾರ್ಯವಾಗಿ ಪುರಪಟ್ಟಣದ ಅನೇಕ ವಿಷಯಗಳು, ಅವುಗಳ ಸ್ಥಳನಾಮಗಳು ಕಣ್ಮುಂದೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಗೋರಿಕೆಳಗಣ ಗ್ರಾಮ ಎಂಬ ಸ್ಥಳನಾಮವು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಇದರ ಜಾಡನ್ನು ಹಿಡಿದು ಹೊರಟಾಗ ವಿಜಯನಗರ ಸಾಮ್ರಾಜ್ಯದಲ್ಲಿ ಮುಸ್ಲಿಮರು ಸೇನಾಯೋಧರಾಗಿ, ಅಶ್ವಾಳು-ಬಿಲ್ಲಾಳುಗಳಾಗಿ, ದಂಡನಾಯಕರಾಗಿ, ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಗತಿ ಅತ್ಯಾಕರ್ಷಕವಾಗಿ ಗೋಚರಿಸಿತ್ತು.…