ಡಬಲ್ ಮರ್ಡರ್ ವ್ಯಕ್ತಿಗಳ ಚಹರೆ ಪತ್ತೆ;ಗಾಂಜಾ ಏಟಿಗೆ ಬಲಿಯಾದ್ರಾ ಇಬ್ಬರು?
ಬೆಂಗಳೂರು,ಸೆ,02: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಗೋಲ್ಡ್ ಕಾಯಿನ್ ಕ್ಲಬ್ ಎದುರಿನ ನಿರ್ಜನ ನೀಲಗಿರಿ ತೋಪಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ವ್ಯಕ್ತಿಗಳ ಮಾಹಿತಿ ಲಭ್ಯವಾಗಿದ್ದು ರವಿಕುಮಾರ್ ಮತ್ತುಕೊಲ್ಕತ್ತಾ ಮೂಲದ ಚಂದನ್ ಗುಪ್ತಾ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಸಮೀಪದ ಏರಿಯಾದ ನಿವಾಸಿ ರವಿಕುಮಾರ್. ಚಂದನ್ ಹುಸ್ಕೂರು ಸಮೀಪದ ಘಟ್ಟಹಳ್ಳಿಯಲ್ಲಿ ವಾಸವಿದ್ದನೆನ್ನಲಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್ ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಈ ನಿಗೂಢ ಕೋಲೆಗಳ ಹಿಂದಿನ ಸತ್ಯ…