ಪ್ರೀತಿ ಮತ್ತು ಕ್ರೈ ಕಥೆಯ ಸಾಮರ್ಥ್ಯಾ
ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯಾ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ರವರು ಕ್ಯಾಮೆರಾ ಚಾಲನೆ ನೀಡಿದರು.ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ – ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ,…