ಜಮೀನು ವಿವಾದಕ್ಕೆಒಂದೇ ಕುಟುಂಬದ ನಾಲ್ವರು ಹತ್ಯೆ
ಬಾಗಲಕೋಟೆ,ಆ,28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಜಮೀನು ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮುದರೆಡ್ಡಿ ಎಂಬುವರ ಕುಟುಂಬದ ನಾಲ್ವರನ್ನು ಮತ್ತೊಂದು ಕಡೆಯವರು ಹತ್ಯೆ ಮಾಡಿದ್ದಾರೆ. ಹನುಮಂತ (48), ಮಲ್ಲಪ್ಪ (44), ಈಶ್ವರ (40) ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ.ಪುಠಾಣಿ ಎಂಬ ಕುಟುಂಬಸ್ಥರು ಈ ನಾಲ್ವರನ್ನು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಜಮಖಂಡಿ…