ಧರ್ಮಮೀರಿದ ಮಾನವೀಯತೆ
ದರ್ಮಮೀರಿದ ಮಾನವೀಯತೆ ಅದು ೨೦೦೪ರ ಏಪ್ರಿಲ್ ತಿಂಗಳ ೨೩ನೇ ತಾರೀಖಿನ ರಾತ್ರಿ ಒಂಬತ್ತರ ಸಮಯ. ಮೊದಲನೇ ಬಾರಿಗೆ ಮಸ್ಕತ್ ನ ಸೀಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನನಗೆ ಹೊರಗಿನ ವಾತಾವರಣದ ಹಬೆಯಂತಹ ಬಿಸಿಗಾಳಿ ಸ್ವಾಗತ ಕೋರಿತ್ತು. ಅಪರಿಚಿತ ನೆಲದಲ್ಲಿ ಕಾಲಿಟ್ಟ ಹೊತ್ತು ಸಹಜವಾಗಿಯೇ ನನ್ನಲ್ಲಿ ಅರಿಯದ ಒಂದು ಆತಂಕ ಮನೆಮಾಡಿತ್ತು. ನನ್ನ ಉದ್ಯೋಗ, ವಾಸಮಾಡಲಿರುವ ಮನೆ ಇಂತಹ ಹಲವು ಹತ್ತು ವಿಷಯಗಳು ಪೂರ್ವನಿರ್ಧಾರವಾಗಿದ್ದಾರೂ ನಮ್ಮದಲ್ಲದ ನೆಲದಲ್ಲಿ ಬದುಕನ್ನು ಮತ್ತೆ ಕಟ್ಟಬೇಕಾದ ಅನಿವಾರ್ಯತೆಯೊಂದು ನನ್ನೆದುರು ಧುತ್ತೆಂದು ನಿಂತಿತ್ತು.…