Girl in a jacket

Daily Archives: August 20, 2021

21 ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಸಿಎಂ

ಆಲಮಟ್ಟಿ; ಆ.೨೧ರಂದು ತುಂಬಿದ ಕೃಷ್ಣೆಯ ಜಲನಿ ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲಮಟ್ಟಿಜಲಾಶಯಕ್ಕೆ ಗಂಗಾಪೂಜೆ, ಬಾಗಿನ ಅರ್ಪಿಸಿದ ನಂತರ ಪ್ರವಾಹಮತ್ತು ಕೋವಿಡ್ ಕುರಿತು ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಹೇಳಿದರು. ಶುಕ್ರವಾರ ಆಲಮಟ್ಟಿ ಜಲಾಶಯದ ಹಿಂಭಾಗದ ಬಾಗೀನ ಅರ್ಪಿಸುವಸ್ಥಳ ಹಾಗೂ ಹೆಲಿಪ್ಯಾಡಗೆ ಭೇಟಿ ನೀಡಿ ಅವರು ಮಾತನಾಡಿದರು. ಹೆಲಿಕಾಪ್ಟರ್ ಮೂಲಕ ಆಗಮಿಸುವ ಮುಖ್ಯಮಂತ್ರಿಯವರು ಹೆಲಿಪ್ಯಾಡ್‌ನಿಂದ ನೇರವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು, ಅವರೊಂದಿಗೆ ಸಚಿವರುಗಳು ಇರಲಿದ್ದು, ನಂತರ ಜಲಾಶಯಕ್ಕೆತೆರಳಿ ಬಾಗಿನ ಅರ್ಪಿಸುವರು. ಅವಳಿ ಜಿಲ್ಲೆಯ…

ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ?

ಬಿಎಸ್ ವೈ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡುವಿನ ಸದ್ಯದ ರಾಜಕೀಯ ಪರಿಸ್ಥಿತಿ ಯ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರ ಅವಲೋಕನ ಮಾಡಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ? ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿರುವ ಬಿ ಎಸ್ ಯಡಿಯೂರಪ್ಪನವರು ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಆತಂಕಗೊಂಡಿದ್ದಾರೆ ಎನ್ನಲಾಗಿದೆ. “ಯಡಿಯೂರಪ್ಪನವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.ನಂತರ ಪ್ರಧಾನಿ ನರೇಂದ್ರ ಮೋದಿ,ಅಮಿತ್…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ… ಅವಳು ಹುಡುಗಿ. ಅವಳು ಕೈಲಾಗದವಳು ! ಮದುವೆಯಾಗಿ ಮನೆಯೊಳಗೇ ಇರಬೇಕಾದವಳು !! ಎಂಬ ಸಾಂಪ್ರದಾಯಿಕ ಹೇಳಿಕೆಗಳನ್ನ ತನ್ನ ಜೀವನ ಸಂಘರ್ಷಗಳಿಂದಲೇ ಮಣಿಸಿ ಹರ್ಷ ಕಂಡವಳು ಮೇರಿ ಕೋಮ್. ಎಲ್ಲರಂತೆ ಸಾಮಾನ್ಯ ಕನಸುಗಳನ್ನ ಕಾಣದೆ ತನ್ನ ಹರೆಯದ ವಾಂಛೆಗಳನ್ನ ಬಾಕ್ಸಿಂಗ್ ರಿಂಗ್ ನೊಳಗೇ ಕೂಡಿ ಹಾಕಿದವಳು. ಬ್ಯಾಕ್ಸಿಂಗ್…ಬಾಕ್ಸಿಂಗ್..ಬಾಕ್ಸಿಂಗ್!!! ಎಂದು ನಿದ್ದೆ ಎಚ್ಚರಗಳಲ್ಲೂ ಧ್ಯಾನಿಸಿದವಳು ಮೇರಿ ಕೋಮ್. ” ಏನೇ ನೀನು ಬರು ಬರುತ್ತಾ ಹುಡುಗನಂತೆ ಆಡುತ್ತಿದ್ದೀಯ?, ನಿನ್ನ ಮುಖಕ್ಕೆ ಏಟು ಬಿದ್ದರೆ…

ಬಣ್ಣಿಸುವರಾರದನು? ಮಂಕುತಿಮ್ಮ

ಸಿದ್ಧಸೂಕ್ತಿ :       ಬಣ್ಣಿಸುವರಾರದನು? ಮಂಕುತಿಮ್ಮ. ಜಗದ ಉಗಮ ನೆಲೆ ಗತಿ ನಿಗೂಢ. ಬಗೆ ಬಗೆಯ  ರಚನೆಯನಾರು ಬಲ್ಲರು? ಕುಂಬಾರ ಗಡಿಗೆ ಮಾಡಿದ ತೆರದಿ ತಾಯಿ ಮಗುವ ರಚಿಪಳೇ? ಸಾವೇನು ಏಕೆ ರಹಸ್ಯ ಬಲ್ಲವರಾರು? ಉಂಡು ಮಿಕ್ಕಿದ ಎಂಜಲದ ಅಗುಳು ಯಾವ ಕಾಲುವೆಯಲಿ ಹರಿದು ಎಲ್ಲಿ ಸೇರುವುದೋ? ಯಾವುದಕ್ಕೆ ಆಹಾರವಾಗುವುದೋ? ಎಲ್ಲಿ ಮಣ್ಣಾಗುವುದೋ? ಅದರ ಸತ್ತ್ವ ಹೀರಿ ಯಾವುದು ಬೆಳೆಯುವುದೋ? ಆ ಬೆಳೆ ಯಾರಿಗೆ ಆಹಾರವಾಗುವುದೋ? ಅದರಿಂದ ಅವರಿಂದ ಯಾರ್ಯಾರಿಗೆ ಏನೇನಾಗುವುದೋ? ತಿಳಿದವರಾರು? ಹೇಳುವವರಾರು?…

Girl in a jacket