ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಶ್ರೀಮಂತವಾಗಿ ಬೆಳೆಯುತ್ತದೆ: ಬೊಮ್ಮಾಯಿ
ಬೆಂಗಳೂರು, ಆ, 18: ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ 2019- 20 ನೇ ಸಾಲಿನ ವಿವಿಧ ರಾಜ್ಯ ಪ್ರಶಸ್ತಿ ಹಾಗೂ ಬಸವ ರಾಷ್ಟ್ರೀಯ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನವೀಯ ಮತ್ತು ಮಾತೃ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂದ ಮುಖ್ಯಮಂತ್ರಿಗಳು…