Girl in a jacket

Daily Archives: August 17, 2021

ಮಿನಿ ವಿಶ್ವಕಪ್ ಸಮರಕ್ಕೆ ಮುಹೂರ್ತ ಫಿಕ್ಸ್..!

Reported By: H.D. Savita ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟ ಮಾಡಿದೆ. ಈ ವರ್ಷ ಟಿ-20 ವಿಶ್ವ ಕಪ್ ಟೂರ್ನಿಯ ಪಂದ್ಯಗಳು ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿದೆ. ಇದರ ಪ್ರಕಾರ ಟೂರ್ನಿಗೆ ಅಕ್ಟೋಬರ್ 17 ರಂದು ಚಾಲನೆ ಸಿಗಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.   ಅಕ್ಟೋಬರ್ 17 ಮೊದಲ ರೌಂಡ್ ಪಂದ್ಯ ಒಮನ್ ಮತ್ತು ಪಿಎನ್​ಜಿ ನಡುವೆ ನಡೆಯಲಿದೆ. ಸಾಕಷ್ಟು ರೋಚಕತೆ…

ಅಸಾಧ್ಯವನ್ನು ಸಾಧಿಸಿತೋರಿಸಿದಚನ್ನಯ್ಯ-ರೂಪಕಲಾ

ಶಿಕಾರಿಪುರ,ಆ,೧೮:ಮಂದಹಾಸ ದ ನಗುವ ಬೀರುವ ಸಂಸ್ಕಾರ ಅರಿತ ವ್ಯಕ್ತಿ ಮೀರಿದ ವ್ಯಕ್ತಿತ್ವದ ಪರಿಚಯದ ಶಿಕ್ಷಣದಿಂದ ಶಿಕ್ಷಕ ವೃತ್ತಿ ಅರಿತ ಚನ್ನಯ್ಯ ಸಾವು ಅನಿರೀಕ್ಷಿತ ನಾವು ಈ ಜ್ಞಾನ ದೇಗುಲದ ದೇವರನ್ನೇ ಕಳೆದು ಕೊಂಡಂತಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ರೂಪಕಲಾ ಹೆಗ್ಗಡೆ ಅಭಿಪ್ರಾಯಪಟ್ಟರು. ನಗರದ ಶ್ರಿ ಚನ್ನಮಲ್ಲಿಕಾರ್ಜುನ ಶಾಲೆಯಲ್ಲಿ ನೆಡೆದ ದಿ.ಚನ್ನಯ್ಯ ನವರ ಪುಣ್ಯ ಸ್ಮರಣೆ ನುಡಿ ನಮನ ವಿದ್ಯಾ ನಾವಿಕಾನಿಗೊಂದು ನಮನ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು . ಸ್ಥಿತಿವಂತರು .ಶಿಪಾರಸ್ಸು ಜನರು…

ಪೆಟ್ರೋಲ್ ಮೇಲಿನ ತೆರಿಗೆ ಕಡಿತ ಇಲ್ಲ-ಸಿಎಂ

ಬೆಂಗಳೂರು,ಆ,೧೮: ‘ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕಡಿತ ಪ್ರಸ್ತಾಪ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೩ ತೆರಿಗೆ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಡಿತ ಮಾಡುವ ಚಿಂತನೆ ಇಲ್ಲ ಎಂದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್ ತಪಾಸಣೆಯ ನೆಗೆಟಿವ್ ವರದಿ ಕೊಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆ ಕೋವಿಡ್ ಪರೀಕ್ಷೆಯಲ್ಲಿ ದಂಧೆ…

೨೦ರವರೆಗೂ ಅಧಿಕ ಮಳೆ ಸೂಚನೆ

ನವದೆಹಲಿ, ಆ, 17: ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ತೆಲಂಗಾಣದಲ್ಲಿ ಅಧಿಕ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ತೆಲಂಗಾಣದಲ್ಲಿ ಮುಂದಿನ ಮೂರು ದಿನಗಳ ಕಾಲ, ಅಂದರೆ ಆಗಸ್ಟ್ ೨೦ರವರೆಗೂ ಅಧಿಕ ಮಳೆಯಾಗುವುದು ಎಂದು ತಿಳಿಸಿದೆ. ತೆಲಂಗಾಣ ಮಧ್ಯ, ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಸಾಧಾರಣದಿಂದ ಅಧಿಕ ಮಟ್ಟದ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ಒಡಿಶಾದ ಕರಾವಳಿ ಹಾಗೂ ಆಂಧ್ರಪ್ರದೇಶದ…

ತೆರುವನಸ್ಥಿಯ ಧರೆಗೆ ಮಂಕುತಿಮ್ಮ

ಸಿದ್ಧಸೂಕ್ತಿ :           ತೆರುವನಸ್ಥಿಯ ಧರೆಗೆ ಮಂಕುತಿಮ್ಮ. ಬದುಕು ಸ್ಥಿರವಲ್ಲ. ಬುಗುರಿಯಂತೆ ಅಸ್ಥಿರ! ಗಿರ್ರನೆ ತಿರುಗುವ ಬುಗುರಿ ಸ್ಥಿರದಂತೆ ತೋರುವುದು. ಕ್ರಮೇಣ ಗತಿ ಕಡಿಮೆಯಾಗುವುದು. ಶಕ್ತಿ ಕುಂದುವುದು.ಭೂಶಕ್ತಿಗೆ ಸೋತು ಉರುಳಿ ಮಲಗುವುದು! ಅಂತೆಯೇ ಎಲ್ಲರ ಬದುಕು. ಜನಪತಿ ಭೂಪತಿ ಧನಪತಿ ದನಪತಿ ಜಗಪತಿ ಗೃಹಪತಿ ಮಠಪತಿ ಖಗಪತಿ ಸುರಪತಿ ಬಲಪತಿ ದಳಪತಿ ಗಜಪತಿ ವನಪತಿ ಕುಲಪತಿ ವಿದ್ಯಾಪತಿ ಪತಿ ಪತ್ನಿ ಯಾರಾದರೇನು? ಇದ್ದಂತೆ ಇರಲಾರರು! ಏರಿದವನು ಇಳಿಯಲೇಬೇಕು, ಉಬ್ಬಿದವನು ಸೊರಗಲೇಬೇಕು!…

Girl in a jacket