Girl in a jacket

Daily Archives: August 16, 2021

ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾರತಕ್ಕೆ ರೋಚಕ ಗೆಲುವು..!

Reported By : H.D Savita ಲಾರ್ಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವು1 51ರನ್ ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದೆ. ಅಂತಿಮ ದಿನದಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಗೆಲುವನ್ನು ಮತ್ತಷ್ಟು ಸ್ಮರಣಿಯವಾಗಿಸಿ ಕೊಂಡಿತು. ಈ ಮೂಲಕ 5ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತವು 1-0 ದಿಂದ ಮುನ್ನಡೆ ಪಡೆದಿದೆ. ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯವಾಗಿತ್ತು.

ಪರಮಹಂಸದಂತೆ ಎತ್ತರಕ್ಕೆ ಏರಿ;ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ

ಬೆಂಗಳೂರು, ಆ, 16:ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರಸ್ವತಿಯ ಪಾವಿತ್ರ್ಯತೆಯನ್ನು ಹೊಂದಿ ಪರಮಹಂಸದಂತೆ ಬಹಳ ಎತ್ತರಕ್ಕೆ ಏರಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್ ನ್ನು ಇಂದು ಅವರು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ:ರಾಜ್ ಕುಮಾರ್ ಅವರ ಆಪ್ ದೊಡ್ಡ ಕೊಡುಗೆ…

ಭಾರತಿ ವಿಷ್ಣುವರ್ಧನ್ ಕುರಿತ ಬಾಳೆ ಬಂಗಾರ ಸಾಕ್ಷ್ಯಚಿತ್ರ ಶೀಘ್ರ ಬಿಡುಗಡೆ

ಬೆಂಗಳೂರು, ಆ, 16:  ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯ ಚಿತ್ರ ಬಾಳೆ ಬಂಗಾರ ಕನ್ನಡ ಚಿತ್ರರಂಗದಲ್ಲಿ  ಗಮನ ಸೆಳೆಯುತ್ತಿದೆ. ‘ಬಾಳೆ ಬಂಗಾರ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಟ್ರೈಲರ್ ಲಾಂಚ್ ಆಗಿದೆ.ಅನಿರುದ್ಧ್ ಪರಿಕಲ್ಪನೆ, ಸಂಶೋಧನೆ, ನಿರೂಪಣೆ, ನಿರ್ದೇಶನ ಮಾಡಿ, ಕೀರ್ತಿ ಇನ್ನೋವೇಶ್ ಬ್ಯಾನರ್ ನಲ್ಲಿ ‘ಬಾಳೆ ಬಂಗಾರ’ ನಿರ್ಮಿಸಿದ್ದಾರೆ. ನಿನ್ನೆ ಭಾರತಿ ವಿಷ್ಣುವರ್ಧನ್ ಜನ್ಮದಿನ ನಿಮಿತ್ತ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ನಟ ಶಿವರಾಂ, ನಿರ್ದೇಶಕ ಭಗವಾನ್, ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಭಾರತಿ…

23ರಿಂದ 8 ರಿಂದ 11ನೇ ಶಾಲೆಗಳ ಆರಂಭಕ್ಕೆ ಸರ್ಕಾರ ನಿರ್ಧಾರ

ಬೆಂಗಳೂರು,ಆ,16: ಇದೇ ತಿಂಗಳ 23ರಿಂದ ಶಾಲಾ-ಕಾಲೇಜುಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್‌ ಅವರು; 8ರಿಂದ 11ನೇ ತರಗತಿಗಳ ಭೌತಿಕ ಪಾಠಗಳನ್ನು ಆರಂಭ ಮಾಡಲು ನಿರ್ಧರಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರನ್ನು ಕೋರಿದರು. ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಅಗಸ್ಟ್ 30 ರಂದು ತಜ್ಞರ ಸಲಹಾ ಸಮಿತಿ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು…

ಬೃಹತ್ ಬಜೆಟ್ ನ ಕೃಷ್ಣರಾಜ ಚಿತ್ರ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜದಂಥ ಸಿನಿಮಾಗಳಿಂದ ಕನ್ನಡ ಸಿನಿಮಾರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಂಥ ಬಿಗ್ ಪ್ರಾಜೆಕ್ಟ್ ಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ…

ನಿರ್ಮಾಪಕ ವಿಜಯಕುಮಾರ್ ನಿಧನ

ಬೆಂಗಳೂರು,ಆ,16: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಬಿ.ವಿಜಯ್ ಕುಮಾರ್(63) ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ವಿಜಯ್ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು. ಸಿಂಹಾದ್ರಿಯ ಸಿಂಹ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದರು. ಭಾನುವಾರ ರಾತ್ರಿ 9.30ರ ಸುಮಾರಿಗೆ ವಿಜಯ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಡಾ.ವಿಷ್ಣುವರ್ಧನ್ ಗೆ ಆಪ್ತರಾಗಿದ್ದ ನಿರ್ಮಾಪಕ ವಿಜಯ್ ಕುಮಾರ್, ನಟ ವಿಷ್ಣುವರ್ಧನ್ ಲಯನ್ ಜಗಪತಿ ರಾವ್, ಜಗದೇಕ ವೀರ ಮತ್ತು ಸಿಂಹಾದ್ರಿಯ ಸಿಂಹ ಮುಂತಾದ ಚಿತ್ರಗಳ ನಿರ್ಮಾಣ…

ದೇಶಭಕ್ತಿ ಸಾರಿದ ಸಿದ್ಧಾರೂಢರು

ಬೆಂಗಳೂರು, ಆ,16″ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಿದ್ಧಾರೂಢರ ಪಾತ್ರ ಅವಿಸ್ಮರಣೀಯ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ರಾಮೋಹಳ್ಳಿಯ ತಮ್ಮ ಆಶ್ರಮದಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 1904 ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಮಹಾ ಅಧಿವೇಶನದಲ್ಲಿ ಸಿದ್ಧಾರೂಢರು ಅಧ್ಯಕ್ಷರಾಗಿದ್ದರು. “ಜನನೀ ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ. ದೇಶವಿದ್ದರೆ ನಾವು ನೀವು ಧರ್ಮ ಭಾಷೆ ಮತ್ತೊಂದು. ನೆಲೆಯಿಲ್ಲದ…

ದೀಪದ ಕೆಳಗೆ ಕತ್ತಲು

ಸಿದ್ಧಸೂಕ್ತಿ : ದೀಪದ ಕೆಳಗೆ ಕತ್ತಲು. ಸೀಮೆ ಎಣ್ಣೆಯ ಚಿಮಣಿ ಕಾಲದ ಮಾತಿದು. ದೀಪ ಕತ್ತಲೆ ಸರಿಸಿ ಬೆಳಗುವುದು. ಆದರೂ ದೀಪದ ಕೆಳಗೆ / ಹಿಂದೆ ಕತ್ತಲು! ಮುಂದೆ ಬೆಳಗುವ ದೀಪ, ಹಿಂದೆ ಬೆಳಗದು!ಎಲ್ಲರ ಬೆನ್ನು ನೋಡುವ ಕಣ್ಣು, ತನ್ನದೇ ಬೆನ್ನು ನೋಡದು! ವೈದ್ಯರೆಲ್ಲರೂ ತಮ್ಮೆಲ್ಲ ರೋಗ ತಿಳಿಯರು! ಪರರ ಆಡಿಕೊಳ್ಳುವವ, ತನ್ನ ನೋಡಿಕೊಳ್ಳಲಾರ! ಎಲ್ಲ ತಿಳಿದೆ ಎನ್ನುವವ, ತನ್ನನ್ನೇ ತಿಳಿದಿರಲಾರ! ಅವರಿವರ ಅನ್ಯಾಯ ಸರಿಪಡಿಸುವವ, ತನ್ನ ಅನ್ಯಾಯ ಬಚ್ಚಿಟ್ಟು ನಡೆವ! ಆಡಳಿತ ಪಕ್ಷದ ಪ್ರತಿ ಲೋಪ…

Girl in a jacket