Girl in a jacket

Daily Archives: August 15, 2021

ಕನಕಶ್ರೀ ಗಳಿಗೆ ಪಿತೃ ವಿಯೋಗ

ಚಿತ್ರದುರ್ಗ, ಆ,15:ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ ಅವರ ಪೂರ್ವಾಶ್ರಮದ ಪಿತೃಗಳಾದ ಪೂಜ್ಯ ಕಲಮರಹಳ್ಳಿ ಮಹಾದೇವಪ್ಪ ನವರು ಶಿವೈಕ್ಯರಾದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಮಹಾದೇವಪ್ಪ ಅವರು ಹೃದಯಾಘಾತದಿಂದ ಭಾನುವಾರ ಶಿವೈಕ್ಯರಾಗಿದ್ದು ಪತ್ನಿ ಜಯಮ್ಮ, ಮಕ್ಕಳಾದ ಶ್ರೀಧರ್, ಪ್ರದೀಪಕುಮಾರ್, ರೂಪ ಅವರನ್ನು ಹಾಗೂ ತಂಗಿ, ತಮ್ಮ, ಅಣ್ಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಕಲಮರಹಳ್ಳಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶ್ರೀ…

ಸ್ವಾತಂತ್ರ್ಯೋತ್ಸವದಲ್ಲಿ ನಾಡಿನ ಜನತೆಗೆ ಬಂಬರ್ ಕೊಡುಗೆ ಘೋಷಿಸಿದ ಸಿಎಂ

ಬೆಂಗಳೂರು, ಆ. ೧೫: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದಾರೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭಾನುವಾರ ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲ ಬಾರಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ಈ ವೇಳೆ ಹನ್ನೊಂದು ಹೊಸ ಯೋಜನೆಗಳನ್ನು ಸಿಎಂ…

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ ಇಂಥದ್ದೇ ಶ್ರಾವಣ ಮಾಸದ ಚುರುಕು ಬಿಸಿಲ ದಿನ ಒಂದರ ಉತ್ತರಾರ್ಧ ಅದು. ಮೂರ್ನಾಲ್ಕು ದಿನಗಳಿಂದ ‘ಧೋ’ ಎಂದು ಸುರಿದ ಮಳೆ ತನ್ನ ರೌದ್ರನರ್ತನಕ್ಕೆ ತಾತ್ಕಾಲಿಕ ವಿರಾಮ ನೀಡಿದಂತಿತ್ತು. ಅವತ್ತು ಬುಧವಾರದ ದಿನ ಇರಬೇಕು ಅನ್ನಿಸುತ್ತದೆ. ವೈ. ವೃಷಭೇಂದ್ರಯ್ಶ (YV) ಮೇಷ್ಟ್ರು ಎಂಟನೇ ತರಗತಿಯವರಾದ ನಮಗೆ ಸಾಯಂಕಾಲದ ಕೊನೆಯ ಪಿರಿಯಡ್ ನಲ್ಲಿ ಜೀವಶಾಸ್ತ್ರದ ಪಾಠ ಮಾಡುತ್ತಿದ್ದರು. ಅವರು ಅಂದು ಪಾಠಮಾಡುತ್ತಿದ್ದ ವಿಷಯ ಕೂಡಾ ನನಗೆ ಚೆನ್ನಾಗಿ ನೆನಪಿದೆ. ದ್ಯುತಿಸಂಶ್ಲೇಷಣಾ ಕ್ರಿಯೆ…

ಸ್ವಾತಂತ್ರ್ಯಹೋರಾಟಗಾರರನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ,ಆ,15: ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿನವಿದು. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ದೇಶವು ಸ್ಮರಿಸುತ್ತಿದೆ, ಏಕೆಂದರೆ ದೇಶವು ಇವರೆಲ್ಲರಿಗೂ ಋಣಿಯಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಕೋರಿದರು. 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ  ಮೋದಿ, ಭಾರತದ ಮೊದಲ ಪ್ರಧಾನಿ ನೆಹರೂ, ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್,…

ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ

‌‌‌‌‌‌       ಸಿದ್ಧಸೂಕ್ತಿ : ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ. ನೆಮ್ಮದಿ ಬೇಕು. ನಿದ್ದೆ ನೀಡುವುದು ನೆಮ್ಮದಿ! ನಿದ್ದೆ ಹತ್ತುವುದು ಎಲ್ಲ ಬಿಟ್ಟಾಗ! ಬಿಡದಿದ್ದವರಿಗೆ ಸುಖ ನಿದ್ದೆ ಎಂಬುದು ಕನಸಿನ ಮಾತು! ಪ್ರಕ್ಷುಬ್ಧ ಮನಸ್ಸಿನ ವಿರುದ್ಧ ವಿಭಿನ್ನ ನೂರಾರು ಆಲೋಚನೆ, ಬೇಕು ಬೇಡ ದ್ವಂದ್ವ ಕೊರಗುಗಳು ಕಿವಿಯೊಳಗೆ ಸೇರಿದ ಹುಳುವಿನಂತೆ! ಕಿವಿಗೆ ಅಪ್ಪಳಿಸುವ ನಾನಾ ಹಕ್ಕಿಗಳ ಕಿಲ ಕಿಲ ಗೊರ ಗೊರ ಕಿರಚುವ ಕೂಗಿನಂತೆ! ಒಂದು ಆಲೋಚನೆ ಗಿಳಿಯಂತೆ ಸುಂದರ! ಮತ್ತೊಂದು ಅಣಕಿಸುವ ಅಸಹ್ಯಕರ ಗೂಗೆಯಂತೆ!…

Girl in a jacket