Girl in a jacket

Daily Archives: August 9, 2021

ಕರವೇಯಿಂದ ಕೃಷ್ಣಾಹಿನ್ನೀರಿಗೆ ಗಂಗಾಪೂಜೆ

ಆಲಮಟ್ಟಿ, ಆ,09:ಕರ್ನಾಟಕ ರಕ್ಷಣಾವೇದಿಕೆ ಆಲಮಟ್ಟಿ ಘಟಕದವತಿಯಿಂದ ತುಂಬಿದ ಕೃಷ್ಣೆಯ ಹಿನ್ನೀರಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವು ಅಧ್ಯಕ್ಷ ಪತ್ತೆಸಾಬ ಚಾಂದ ನೇತೃತ್ವದಲ್ಲಿ ಸೋಮವಾರ ಜರುಗಿತು. ಪೂಜಾಕಾರ್ಯವನ್ನು ಗೋಪಾಲ ಧರ್ಮರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮತ್ತು ಆಲಮಟ್ಟಿ ಗ್ರಾಮಪಂಚಾಯತ ಅಧ್ಯಕ್ಷ ಮಂಜುನಾಥ ಹಿರೇಮಠ, ಚಂದ್ರಶೇಖರ ಹೆರಕಲ್, ರಸೂಲಸಾಬ ಸಿಂಧೆ, ಬಷೀರ ಮುಲ್ಲಾ, ಯಲಗೂರೇಶ ಮೇಟಿ, ಮಹಿಬೂಬ ಡೊಣೂರ, ರಫೀಕ ಅಥಣಿ, ಶಂಕರ ವಡ್ಡರ, ಸಂತೋಷ ಕನಸೆ, ಗ್ರಾ.ಪಂ.ಸದಸ್ಯ ಬಸವರಾಜ ಬಂಡಿವಡ್ಡರ, ಮಸೂಬಾ ಕಟ್ಟಿಮನಿ, ಹನಮಂತ…

ಐ ಲವ್ ಯು ರಚ್ ಚಿತ್ರೀಕರಣ ವೇಳೆ ಪೈಟರ್ ಗೆ ವಿದ್ಯುತ್ ತಗುಲಿ ಸಾವು

ರಾಮನಗರ,ಆ,09: ಕನ್ನಡದ ಲವ್ ಯು ರಚ್ಚು ಚಿತ್ರೀಕರಣದ ವೇಳೆ ವಿದ್ಯುತ್ ತಗುಲಿ ಪೈಟರ್ ಸಾವನ್ನಪ್ಪಿದ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಜೋಗನದೊಡ್ಡಿಯಲ್ಲಿ ಪೈಟಿಂಗ್ ಶೂಟ್ ನಡೆಯುತ್ತಿತ್ತು ಈ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ (28) ಮೃತಪಟ್ಟಿದ್ದಾರೆ. ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿಯನದ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ರಾಮನಗರ ತಾಲೂಕಿನ ಜೋಗನದೊಡ್ಡಿಯಲ್ಲಿ ನಡೆಯುತಿತ್ತು. ಸ್ಟಂಟ್ ಅನ್ನು ಖಾಸಗಿ ರೆಸಾರ್ಟ್ ಬಳಿ ಚಿತ್ರೀಕರಿಸಲಾಗುತ್ತಿತ್ತು ಮತ್ತು ವಿವೇಕ್ ಮತ್ತು ಸ್ಟಂಟ್ ಸಿಬ್ಬಂದಿ ಆ…

47 ಕುಟುಂಬಗಳಿಗೆ ಸಚಿವರಿಂದ ಹಕ್ಕುಪತ್ರ ವಿತರಣೆ

ವಿಜಯಪುರ,ಆ,09: ನಿರಂತರವಾಗಿ ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ಬದಕು ಕಳೆದುಕೊಂಡಿದ್ದ ತಾರಾಪುರ ಗ್ರಾಮದ ನಿರಾಶ್ರಿತರಿಗೆ ಹೊಸ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ವಿಜಯಪುರ ಕೊವಿಡ್ ಮತ್ತು ಪ್ರವಾಹ ಉಸ್ತುವಾರಿ ಸಚಿವರಾಗಿರುವ ಶಶಿಕಲಾ ಜೊಲ್ಲೆ ದಶಕಗಳ ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸೋಮವಾರ 47 ಜನರಿಗೆ ಹಕ್ಕು ಪತ್ರ ವಿತರಣೆಯನ್ನು ಸಚಿವರಾದ ಶಶಿಕಲಾ ಜೊಲ್ಲೆಯವರು ಮಾಡಿದರು. 2010 ರಿಂದ ಬಗೆ…

ರಾಜ್ಯದ ದೇವಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ : ಜೊಲ್ಲೆ

ವಿಜಯಪುರ,ಆ,09 : ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾಗಿ ನೇಮಕಗೊಂಡಿರುವ ಶಶಿಕಲಾ ಜೊಲ್ಲೆಯವರು ವಿಜಯಪುರ ನಗರದ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ನಾಡಿನ ಜನತೆ ಕೊರೊನಾ ಮಹಾಮಾರಿ ಹಾಗೂ ಪ್ರವಾಹ ಸಂಕಷ್ಟದಿಂದ ಹೊರ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸದ ಮೊದಲ ಸೋಮವಾರ ಅತ್ಯಂತ ಪುಣ್ಯದ ದಿನವಾಗಿದ್ದು ಈ ದಿನ ಶಿವನ ಪೂಜೆ ಮಾಡುವ ಮೂಲಕ ಮುಜರಾಯಿ,…

ಸರ್ಕಾರದ ಕಾರ್ಯಕ್ರಮ ಅನುಷ್ಠಾನ ನಮ್ಮ ಸಂಕಲ್ಪ ಆಗಲಿ;ಸಿಎಂ ಬೊಮ್ಮಾಯಿ

ಮೈಸೂರು,ಆ,09:ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ. ಧೀಮಂತ ನಾಯಕರಾದ ಪ್ರಧಾನಿ  ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನೇಕ ಪ್ರಮುಖರ ನಾಯಕತ್ವದಲ್ಲಿ 40 ವರ್ಷಗಳಿಂದ ಈ ಪಕ್ಷ ಕಟ್ಟಲ್ಪಟ್ಟಿದೆ. ಪಕ್ಷ, ಪಕ್ಷ ನಿಷ್ಠೆ, ಪಕ್ಷದ ಕಾರ್ಯ ಕ್ರಮಗಳ ಅನುಷ್ಠಾನ ಪಕ್ಷದ ಕಾರ್ಯಕರ್ತರಾದ ನಮ್ಮೆಲ್ಲರ ಸಂಕಲ್ಪ ಆಗಬೇಕು. ಈ ಕೆಲಸವನ್ನು ಮುಂದಿನ 2 ವರ್ಷಗಳಲ್ಲಿ ನಾವು ಪ್ರಾಮಾಣಿಕವಾಗಿ ವಿಶ್ವಾಸಪೂರ್ವಕವಾಗಿ ನಾಡಿನ ಸೇವೆ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಮೈಸೂರು ನಗರದಲ್ಲಿ ಭಾರತೀಯ…

ಮೇಕೆದಾಟು ಯೋಜನೆಗೆ ಶೀಘ್ರ ಕೇಂದ್ರದ ಅನುಮೋದನೆ: ಸಿಎಂ ವಿಶ್ವಾಸ

ಮೈಸೂರು, ಆ, 9: ಮೇಕೆದಾಟು ಯೋಜನೆಯ ಡಿಪಿಆರ್ ಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು. ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದಾಗ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ದೊರೆತಿದೆ. ಇದಕ್ಕೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದು ಪೂರ್ಣಗೊಂಡ ಕೂಡಲೇ ಕೇಂದ್ರದ…

ಕಚ್ಚಾತೈಲ ಬೆಲೆ ಕುಸಿದರೂ ಪರಿಷ್ಕರಣೆಯಾಗದ ಇಂಧನ ಬೆಲೆ..!

ನವದೆಹಲಿ, ಆ, 09: ಜಾಗತಿಕವಾಗಿ ಕಚ್ಚಾತೈಲ ಬೆಲೆ ಈ ವಾರದಲ್ಲಿ ತೀವ್ರ ಕುಸಿತವಾದರೂ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ 23 ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದೆ. ಆಗಸ್ಟ್ 9ರಂದು ಇಂಧನ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ ಏರಿಕೆ ಮಾಡಲಾಗಿತ್ತು.…

ಕ್ರೈಂ ಥ್ರಿಲ್ಲರ್ ಮಾರಿಗೋಲ್ಡ್..!

ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ ದಿಗಂತ್‌ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ರಾಘವೇಂದ್ರ ನಾಯಕ್…

ಬಿಗ್‌ಬಾಸ್ ಸೀಸನ್ ೮ ರ ವಿನ್ನರ್ ಆಗಿ ಪಾವಗಡ ಮಂಜು

ಬಿಗ್ ಬಾಸ್ ಸೀಸನ್ ೮ ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಅವರಿಗೆ ೪೫,೦೩,೪೯೫ ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ ೪೩,೩೫,೯೫೭ ಮತಗಳು ಬಿದ್ದಿವೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯಾಗಿದೆ. ರಂಗಭೂಮಿ ಹಿನ್ನಲೆಯುಳ್ಳ ಮಂಜು, ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರು ಮತ್ತು ವೀಕ್ಷಕರ ಮನ ಗೆದ್ದಿದ್ದರು. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಜೊತೆಗಿನ ಕೆಲ ಗದ್ದಲಗಳನ್ನು ಬಿಟ್ಟರೆ ಬೇರಾವ ಜಗಳದಲ್ಲೂ ಮಂಜು ಕಾಣಿಸಿಕೊಂಡವರಲ್ಲ.ಹಾಸ್ಟೆಲ್ ಟಾಸ್ಕ್…

Girl in a jacket