ಆಲಮಟ್ಟಿ ಶಾಸ್ತ್ರೀಸಾಗರ ಭರ್ತಿಗೆ ಕ್ಷಣಗಣನೆ
ಆಲಮಟ್ಟಿ,ಆ,04: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರೀ ಜಲಾಶಯ ಭರ್ತಿಯಾಗಲು ೦.೭೮ಮೀಟರ್ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮವಾಗಿ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ.೨೨ರಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದುಬಂದ ಪರಿಣಾಮವಾಗಿ ಜಲಾಶಯದ ಎಲ್ಲ ೨೬ಗೇಟುಗಳು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ…