Girl in a jacket

Daily Archives: July 31, 2021

ಯಾರೇ ಅಡ್ಡಿಪಡಿಸಿದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ; ಸಿಎಂ

ಬೆಂಗಳೂರು, ಜು,31: ಮೇಕೆ ದಾಟು ಯೋಜನೆಗೆ ಯಾರೆ ಅಡ್ಡಬಂದರೂ ನಿಲ್ಲುವುದಿಲ್ಲ ಯೋಜನೆಯನ್ನು ಮಾಡೀಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕರ್ನಾಟಕದ ಕಾವೇರಿ ನದಿಗೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕ ಸರ್ಕಾರದ ಪರ ನಿಲ್ಲುತ್ತೇನೆ ಎಂದು ಈ ಹಿಂದೆಯೇ ತಿಳಿಸಿದ್ದರು. ಆದರೆ ಈಗ ಮೇಕೆದಾಟು ಯೋಜನೆ ವಿರೋಧಿಸಿ ಕೆ.ಅಣ್ಣಾಮಲೈ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಣ್ಣಾಮಲೈ ವಿಚಾರ…

ಸಂಶೋಧನಾತ್ಮಕ ಸುದ್ದಿಗಳ ಕೊರತೆ; ಶಾಸಕ ಶಿವಾನಂದ ಪಾಟೀಲ್ ವಿಷಾದ

ಆಲಮಟ್ಟಿ,ಜು,31:ಅವಸರದ ಸುದ್ದಿಗೆ ಮಹತ್ವ ನೀಡಿ, ಘಟನೆಯ ವಿವರಾತ್ಮಕ ಬರಹಗಳತ್ತ ಪತ್ರಕರ್ತರು ಗಮನಹರಿಸುತ್ತಿಲ್ಲ ಹೀಗಾಗಿ ಸಂಶೋಧನಾತ್ಮಕ ಸುದ್ದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ವಿಷಾದಿಸಿದರು. ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಡಗುಂದಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಹಾಗೂ ಸಮಾಜದ ಏರು ಪೇರುಗಳನ್ನು ಪತ್ರಕರ್ತರು, ವ್ಯಂಗ್ಯ ಚಿತ್ರಕಾರರು, ಸಾಹಿತಿಗಳು ಸ್ಥಿರವಾಗಿ ನಿರೂಪಿಸುತ್ತಾ ಬಂದಿದ್ದಾರೆ, ಸಾಮಾಜಿಕ ಜಾಲ ತಾಣಗಳ ಮಧ್ಯೆಯೂ ಪತ್ರಿಕೆಗಳನ್ನು…

ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಓ ಭೇಟಿ

ಆಲಮಟ್ಟಿ,ಜು,31:ಆಲಮಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡಕಲಗುಂಡಪ್ಪ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಆಲಮಟ್ಟಿ ಗ್ರಾಮ ಪಂಚಾಯ್ತಿಯಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಡಿ ಕೂಲಿಕರ‍್ಮಿಕರಿಗೆ ಕೆಲಸವೇ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ ೧೫೦ ಮಹಿಳೆಯರಿಗೆ ಜಾಬ್ ಕರ್ಡ್ ಮಾಡಿಸಿ ಕೂಲಿ ಕೆಲಸ ನೀಡಲಾಗಿದೆ. ಸಿಇಓ ಗೋವಿಂದರೆಡ್ಡಿ ಮಾತನಾಡಿ,…

ವಿವಿಧ ಲೇಖಕರ ಕೃತಿಗಳಿಗೆ ಸಾಹಿತ್ಯಪರಿಷತ್ ದತ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು, ಜು,31: ಕನ್ನಡ ಸಾಹಿತ್ಯ ಪರಿಷತ್ತು 2020 ನೇ ಸಾಲಿಗೆ ವಿವಿಧ ಲೇಖಕರ ಒಟ್ಟು 48 ಕೃತಿಗಳಿಗೆ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ’ಗೆ ಎಸ್.ಪಿ. ಯೋಗಣ್ಣ ಅವರ ‘ಆರೋಗ್ಯ ಎಂದರೇನು?’ ಕೃತಿ ಆಯ್ಕೆಯಾಗಿದೆ. ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ವಾಸುದೇವ ಬಡಿಗೇರ ಅವರ ‘ದೇವರ ದಾಸಿಮಯ್ಯ-ಮರುಚಿಂತನೆ’ ಕೃತಿ, ‘ಭಾರತಿ ಮೋಹನ ಕೋಟಿ…

ಗುರುಶೋಧನೆ

‌‌‌‌‌‌        ಗುರುಶೋಧನೆ. ಆಕಾಶವು ಹೇಗೆ ನಾಶವಾಗುವುದು? ಸಿದ್ಧಬಾಲಕನ ಈ ಪ್ರಶ್ನೆಗೆ ವೀರಭದ್ರ ಸ್ವಾಮಿಗಳು ಹೇಳಿದ್ದು:”ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು” ಎಂದು. ಯೋಗ್ಯ ಗುರುವನ್ನು ಹುಡುಕಬೇಕೆಂದು ಸಿದ್ಧನು ಅಂದೇ ಮನಸ್ಸಿನಲ್ಲಿ ನಿರ್ಧರಿಸಿದನು. ಮರುದಿನ ಬೆಳಿಗ್ಗೆ ಎದ್ದು, ಯಾರಿಗೂ ಹೇಳದೇ ಮನೆ ಬಿಟ್ಟು ಹೊರಟನು. ದಾರಿಯಲ್ಲಿ ಮಿತ್ರರಾದ ಸೋಮ ಭೀಮರು ಕಣ್ಣಿಗೆ ಬಿದ್ದರು. ಸಿದ್ಧನನ್ನು ಕಂಡೊಡನೆಯೇ “ಸಿದ್ಧ ಎಲ್ಲಿಗೆ ಹೊರಟಿರುವಿ? ” ಎಂದು ಕೇಳಿದರು. ಆಗ ಸಿದ್ಧ ಹೀಗೆ ಉತ್ತರಿಸಿದ : “ಈ ಪ್ರಪಂಚವೆಲ್ಲವೂ…

ಜಿಎಸ್ ಟಿ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ, ಜು,31:ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಕುರಿತು ಚರ್ಚಿಸಿದರು. ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ…

ರಾಜ್ಯದ ಆರೋಗ್ಯ ಮೂಲಸೌಕರ್ಯ ಅಭಿವೃದ್ದಿಗೆ ಕೇಂದ್ರದಿಂದ ನೆರವು : ಸಿಎಂ ಬೊಮ್ಮಾಯಿ

ನವದೆಹಲಿ,ಜು31 : ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಳ ಮನ್ ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.…

ತಂದೆ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ ಶಿವಣ್ಣ,ಪುನೀತ್

ಚಾಮರಾಜನಗರ,ಜು,೩೧: ತಮ್ಮ ತಂದೆ ವರನಟ ಡಾ.ರಾಜ್‌ಕುಮಾರ್ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್,ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು. ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು. ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು.…

ಆಲಮಟ್ಟಿ ಡ್ಯಾಂಗೆ ಹೆಚ್ಚಿದ ನೀರು ಜಮೀನುಗಳು ಜಲಾವೃತ

ಆಲಮಟ್ಟಿ,ಜು,೩೧: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, ೪.೨೦ ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ ೪.೨೦ ಲಕ್ಷ ಕ್ಯುಸೆಕ್ ಇದೆ. ಸದ್ಯ ೫೧೯.೬೦ ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ೫೧೭.೧೭ ಮೀ.ವರೆಗೆ ನೀರಿದ್ದು, ೮೬.೫೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮzಲ್ಲಿ ಇಲ್ಲಿಯವರೆಗೆ…

ನಿಡಗುಂದಿ: ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಸಲಹೆ

ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು. ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ…

ಕಳ್ಳನ ನಂಬಿದರೂ ಕುಳ್ಳನ ನಂಬಬಾರದು

ಸಿದ್ಧಸೂಕ್ತಿ : ಕಳ್ಳನ ನಂಬಿದರೂ ಕುಳ್ಳನ ನಂಬಬಾರದು. ಕಳ್ಳನ ಮಾತು ಬಹುತೇಕ ಸುಳ್ಳು. ನಿಜದಂತೆ ನಟಿಸಿ ಕದಿಯುವನು, ವಂಚಿಸುವನು. ಆದರೂ ಕಳ್ಳ ಎಂದು ತಿಳಿದಿದ್ದರೆ ನಂಬಬಹುದು. ಕಳ್ಳನ ಕೈಗೇ ಬೀಗ ಇತ್ತರೆ? ಕಳವು ಕಷ್ಟ! ಕುಳ್ಳ ಗಾತ್ರದಲಿ ಕಡಿಮೆ. ಮಹತ್ತ್ವ ಅಳೆಯಲಾಗದು! ಬುದ್ಧಿ ಮಿಕ್ಕವರಿಗಿಂತ ಹಿರಿದು! ನಡೆ ಸಾಧನೆ ಊಹಿಸಲಾಗದು! ಬಹುತೇಕ ಕುಳ್ಳರು ವಿವಾದ ತಪ್ಪಿಗೆ ಸಿಲುಕರು. ಮೂಲೆಗುಂಪಾಗರು. ಸದಾ ಚಟುವಟಿಕೆ! ಬಲು ಜೋರು! ಲಾಲ್ ಬಹದ್ದೂರ್ ಶಾಸ್ತ್ರೀ ಉತ್ತಮ ನಿದರ್ಶನ! ಹುಲ್ಲಿನಂತೆ ಚುಟುಕಾಣಿಯಾಗಿರು, ಹಸಿರಾಗಿರುವುದು…

ಬೆಳ್ಳಂಬೆಳಿಗ್ಗೆ ರೌಡಿಗಳ ಮನೆಮೇಲೆ ದಾಳಿ,18 ರೌಡಿಗಳ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಜು,31:ಇತ್ತೀಚೆಗೆ ನಗರದಲ್ಲಿ ಮಿತಿಮೀರುತ್ತಿರುವ ಸಮಾಜ ಘಾತಕ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಘಟನೆಗಳಿಗೆ ಕಾರಣವಾಗುತ್ತಿರುವ ಪುಡಾರಿಗಳ ಮನೆಮೇಲೆ ದಾಳಿ ಮಾಡಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು,ಪುಡಾರಿಗಳಿಗೆ ಪುಂಡಾಟ ನಡೆಸದಂತೆ‌ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯಲ್ಲಿ ಕುಖ್ಯಾತ ರೌಡಿಗಳಾದ ಹಂದಿ ಶಿವ,ಅತಾವುಲ್ಲಾ,ತೇಜಸ್,ಮಣಿಕಾಂತ,ಆನಂದ್ ಅಲಿಯಾಸ್ ಬ್ರಿಡ್ಜ್, ಗೆಜ್ಜೆ ವೆಂಕಟೇಶ ಸೇರಿದಂತೆ 63 ರೌಡಿಗಳ ಮನೆ ಮೇಲೆ…

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ ವೀಳೆಯವು ದೇಹ ಮತ್ತು ಮನಸ್ಸಿಗೆ ಆರೋಗ್ಯ ಮತ್ತು ಆಹ್ಲಾದಕರ ಪರಸ್ಪರ ಸ್ನೇಹ, ಪ್ರೀತಿ, ಗೌರವ, ವಿಶ್ವಾಸ, ವಿನಿಮಯ ಮತ್ತು ಒಪ್ಪಂದದ ಸಾಮಗ್ರಿಯೂ, ಬಾಂಧವ್ಯದ ಬೆಸುಗೆಯೂ ಆಗಿದೆ. ವೀಳೆಯದೆಲೆಗೆ ಫಣಿಲಾ, ತಾಂಬೂಲ(ಸಂಸ್ಕೃತ), ಪಾನ್ (ಹಿಂದಿ), ನಾಗವಲ್ಲಿ(ಗುಜರಾತಿ), ವೆಟ್ಟಲೆ(ತಮಿಳು), ತಮಲಾಕು(ತೆಲುಗು), ವೆಟ್ಟಿಲ ಮಲಯಾಳಂ) ಎಂದೂ ಕರೆಯುವರು. ವೀಳೆಯದೆಲೆಯಲ್ಲಿ ಜಗತ್ತಿನಾದ್ಯಂತ 90 ವಿಧದ ತಳಿಗಳಿದ್ದು ಅವುಗಳಲ್ಲಿ 40 ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುವುದೆಂದು ಅಧ್ಯಯನಗಳಿಂದ ತಿಳಿಯುವುದು, ಅವುಗಳಲ್ಲಿ ಇಂದು ಕಲ್ಕತ್ತಾ ಪಾನ್, ಬನಾರಸ್ ಪಾನ್,…

Girl in a jacket