Girl in a jacket

Daily Archives: July 29, 2021

ಆಪರೇಷನ್ ಕಮಲದ ಮೂಲಕ ದುರಾಡಳಿತ ನಡೆಸಿದ ಬಿಜೆಪಿ; ಸಿದ್ದು ಟೀಕೆ

ಬೆಂಗಳೂರು,ಜು29 : ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಹೊಡೆದರು. ಕೊರೋನ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲಿಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು ಎಂದು ಅವರು…

ಅತಿವೃಷ್ಠಿ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ

ಯಲ್ಲಾಪುರ ಜು. 29 : ಧಾರಾಕಾರವಾಗಿ ಸುರಿದ ಮಳೆ ಹಾಗೂ ಅತಿವೃಷ್ಟಿಯಿಂದ ಬಾಧಿತಗೊಳಗಾದ ಯಲ್ಲಾಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳ ಜೊತೆಗೆ ಕೋವಿಡ್ -19 ಲಸಿಕೆ ನೀಡುವ ಕೇಂದ್ರನ್ನೂ ಪರಿಶೀಲನೆ ಮಾಡಿದರು. ನಂತರ ಒಳ ಹಾಗೂ ಹೊರ ರೋಗಿಗಳ ಆರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.…

ಒಲಿಂಪಿಕ್ಸ್ ;ಆತನುದಾಸ್‍ಗೆ ಜಯ, ಪ್ರೀ ಕ್ವಾರ್ಟರ್ ಫೈನಲ್ ಗೆ

ಟೋಕಿಯೋ, ಜು. 29; ಭಾರತದ ಹಾಕಿ ತಂಡ, ಪಿ.ವಿ.ಸಿಂಧು, ಬಾಕ್ಸರ್ ವಿಕಾಸ್ ಕುಮಾರ್, ಶೂಟರ್ ಮನು ಬಾಕರ್ ಅವರು ಗೆಲುವಿನ ಮಿಂಚು ಹರಿಸಿದ್ದರೆ, ಪುರುಷರ ಆರ್ಚರಿಯಲ್ಲಿ ಆತನು ದಾಸ್ ಕೂಡ ಪ್ರೀ ಕ್ವಾರ್ಟರ್ ಫೈನಲ್‍ಗೇರುವ ಮೂಲಕ ಪದಕ ಆಸೆಯನ್ನು ಮೂಡಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಅರ್ಚರಿ 32ರಲ್ಲಿ ಭಾರತದ ಬಿಲ್ಲುಗಾರ ಆತನುದಾಸ್ ಅವರು ದಕ್ಷಿಣ ಕೊರಿಯಾದ ಎರಡು ಬಾರಿ ಒಲಿಂಪಿಕ್ಸ್ ವಿಜೇತರಾದ ಜಿನ್ ಹ್ಯೇಕ್ರ ಸವಾಲನ್ನು ಎದುರಿಸಿದರೂ ಕೂಡ 6-4 ರಿಂದ ಗೆಲ್ಲುವ ಮೂಲಕ ಪ್ರಿ…

ತಂದೆ -ತಾಯಿ ಸಮಾಧಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ,ಜು, 29:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು. ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಅಧಿಕಾರ…

ಹುಬ್ಬಳ್ಳಿ -ಧಾರವಾಡ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ- ಸಿ ಎಂ

ಹುಬ್ಬಳ್ಳಿ.29:ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಷೇಶ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾಧ್ಯಮ‌ದವರೊಂದಿಗೆ ಮಾತನಾಡಿದರು. ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ…

ಈ ಬಾರಿ ದೆಹಲಿ ಬೇಟೆ ವೇಳೆ ಸಚಿವ ಸಂಪುಟ ಕುರಿತು ಚರ್ಚಿಸೊಲ್ಲ; ಸಿಎಂ

ಬೆಂಗಳೂರು,ಜುಲೈ,29: ನಾಳೆ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುವ ಯೋಚನೆ ಇದೆ. ಈ ಭೇಟಿಯ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದರೇ ದೆಹಲಿಗೆ ಹೋಗುತ್ತೇನೆ. ಈ ಬಾರಿ ದೆಹಲಿಯ ಭೇಟಿ ವೇಳೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುವುದಿಲ್ಲ, ಬದಲಿಗೆ ಇನ್ನೊಂದು ಬಾರಿ ದೆಹಲಿಗೆ ಭೇಟಿ…

ತಿಂದು ನಿನ್ನನ್ನ ಋಣ ತೀರುತಲೆ ಪಯಣ!

ಸಿದ್ಧಸೂಕ್ತಿ : ತಿಂದು ನಿನ್ನನ್ನ ಋಣ ತೀರುತಲೆ ಪಯಣ! ಹುಟ್ಟಿದ ಸ್ಥಳ ದಿನ ಗೊತ್ತು. ಸಾವಿನ ಸ್ಥಳ ದಿನ ಹೇಗೆ ತಿಳಿದಿಲ್ಲ! ಎಲ್ಲೋ ಹುಟ್ಟು, ಎಲ್ಲೋ ಅಭಿವೃದ್ಧಿ, ಎಲ್ಲೋ ಹೇಗೋ ಸಾವು! ಯತ್ನ ದುಡಿಮೆ ಪರಿಶ್ರಮಗಳು ಬದಲಿಸಬಲ್ಲವಾದರೂ, ವಿಧಿ ಲಿಖಿತ ಬಲ್ಲವರಾರು? ಬದಲಿಸುವವರಾರು? ಯತ್ನಿಸದೇ ಮುಖ್ಯಮಂತ್ರಿ ಆದವರುಂಟು, ಜಗದ್ಗುರುವಾದವರುಂಟು, ಯತ್ನಿಸಿಯೂ ವಿಫಲರಾದವರುಂಟು! ಅಲ್ಪಮತದವರು – ಗೆಲ್ಲದವರು, ಪ್ರಧಾನಿಯಾದವರುಂಟು, ಏಕ ಮತದಿಂದ ಪತನರಾದವರುಂಟು! ಬಹುಮತವಿದ್ದರೂ ಅಧಿಕಾರದಿಂದ ಇಳಿದವರುಂಟು! ತಿನ್ನಲಿಲ್ಲದವ ನೂರು ದಾಟಿದ್ದುಂಟು, ಸಾವಿರ ಕೋಟಿಯವ ಬೇಗ ನರಳಿ…

Girl in a jacket