ಮುಂದೂಡಿದ್ದ ಐಪಿಎಲ್ ಪಂದ್ಯದ ಪಟ್ಟಿ ಪ್ರಕಟ
ನವದೆಹಲಿ,ಜು,25: ಕೋವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪುನರಾರಂಭಗೊಳ್ಳಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್ನ ದ್ವಿತಿಯಾರ್ಧದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಅವಿರತವಾಗಿ ಶ್ರಮಿಸುತ್ತಿದೆ. ಸೆಪ್ಟೆಂಬರ್ 19ರಿಂದ ಪುನಾರಂಭಗೊಂಡರೆ ಅಕ್ಟೋಬರ್ 10ರಂದು ಎಲಿಮಿನೇಟರ್ ನಡೆಯುತ್ತೆ. ಕ್ವಾಲಿಫೈಯರ್ 1 ಮತ್ತು 2 ಕ್ರಮವಾಗಿ ಅಕ್ಟೋಬರ್ 11 ಮತ್ತು 12ರಂದು ನಿಗದಿಯಾಗಿದೆ. ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಕುರಿತು ಎಎನ್ಐ…