Girl in a jacket

Daily Archives: July 24, 2021

ಪ್ರಹ್ಲಾದ್ ಜೋಶಿ ,ಸಿ.ಟಿ.ರವಿ ಗೆ ಒಲಿಯಲಿದೆ ಸಿಎಂ ಪಟ್ಟ?

ಬೆಂಗಳೂರು,ಜು,24:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಕೂಡ ಸ್ಪಷ್ಟವಾಗುತ್ತದೆ. ದೆಹಲಿಯ ಬಿಜೆಪಿ ಪಕ್ಷದಲ್ಲಿ ನಡೆದ ಕೆಲ ಸಂಭ್ರಮಗಳ ಗಮನಿಸಿದರೆ ರಾಜ್ಯದ ನಾಯಕರ ನಡುವಳಿಕೆಗಳ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಖಚಿತಪಡಿಸುತಿತ್ತು.. ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಿ.ಟಿ.ರವಿ ಅವರನ್ನು ರಾಜ್ಯ ನಾಯಕರು ಗೌಪ್ಯವಾಗಿ ಬೇಟಿಯಾಗಿ ಸಂಭ್ರಮಿಸಿದ್ದು ಪುಷ್ಟಿನೀಡುವಂತಿತ್ತು. ವರಿಷ್ಠರು ‘ಅಚ್ಚರಿಯ ಅಭ್ಯರ್ಥಿ’ಯನ್ನೇ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳೇ ಕೇಳಿ ಬಂದಿದ್ದು,ಅತ್ತ ಸಂಸತ್‌ನಲ್ಲಿ ಸಂಸದೀಯ ವ್ಯವಹಾರಗಳ ಖಾತೆ…

ವೀಳೆಯ ಮತ್ತು ರಣವೀಳ್ಯವೂ ..

ವೀಳೆಯ ಮತ್ತು ರಣವೀಳ್ಯವೂ .. ವೀಳೆಯವು ಪರಂಪರಾಗತ ರೂಢಿ, ಸಂಪ್ರದಾಯಗಳ ಭಾಗವೇ ಆಗಿ ಬೆಳೆದುಬಂದಿರುವುದು ತಿಳಿದ ಸಂಗತಿ. ದೇವರ ನೈವೇದ್ಯವಾಗಿ, ಅಲಂಕಾರಿಕ ಸಾಮಗ್ರಿಯಾಗಿ ಎಲೆಪೂಜೆಯೆಂದೂ, ಮದುವೆಯ ಒಪ್ಪಂದಕ್ಕೆ ಮಹತ್ವದ ಪರಿಕರವಾಗಿಯೂ ಹಾಸುಹೊಕ್ಕಿದೆ. ವಿವಾಹ ಕಾರ್ಯಚಟುವಟಿಕೆಗಳಲ್ಲಿ ವೀಳೆಯಶಾಸ್ತ್ರ, ಈಳೆಶಾಸ್ತ್ರವೆಂದೇ ಜನಜನಿತವಾಗಿದೆ. ಈ ಶಾಸ್ತ್ರವೇ ಗಂಡುಹೆಣ್ಣಿನ ಮಾತುಕತೆಯ ಅಂತಿಮ ರೂಪ, ವೀಳೆಯ ಎಂಬುದು ಎಲೆ-ಅಡಕೆಗಳ ಸಂಯುಕ್ತ ರೂಪ. ಇದನ್ನು ತಾಂಬೂಲವೆಂದೇ ಕರೆಯುತ್ತೇವೆ. ಇದು ದೇಹದ ಆರೋಗ್ಯಕ್ಕೆ ಮದ್ದು ವೀಳೆಯ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಪ್ರಮುಖ ಸಾಧನ. ತಾಂಬೂಲವು…

ಇರುವಕ್ಕಿಯಲ್ಲಿ ನೂತನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಉದ್ಘಾಟನೆ

ಬೆಂಗಳೂರು,ಜು.24:ಶಿವಮೊಗ್ಗ ಜಿಲ್ಲೆಯ ಸಾಗರ  ತಾಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವಕೃಷಿ   ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಸಿ.ಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿದರು. ಈ ನೂತನ ಕೃಷಿ   ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ,ಮಲೆನಾಡು , ಅರೆ ಮಲೆನಾಡು , ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳಿಗೆ ವಿಶೇಷವಾದ ಹಾಗೂ ಕೃಷಿ , ತೋಟಗಾರಿಕೆ ಹಾಗೂ…

ಸೈಲೆಂಟ್ ಸುನೀಲ್ ಸೇರಿ 58 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು, ಜು,24: ನಗರದ ನಟೋರಿಯಸ್ ರೌಡಿ ಸೈಲೆಂಟ್ ಸುನೀಲ ಸೇರಿದಂತೆ58 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿನಡೆಸಿದ್ದಾರೆ. ರೌಡಿಗಳ ಕಾಳುಗಳನ್ನು ಹತ್ತಿಕ್ಕಲು ಮುಂದಾಗಿರುವ ಪೊಲೀಸರು ಈ ದಾಳಿ ನಡೆಸಿದ್ದು ಈ ವೇಲಕೆ 28 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ಹಲವು ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಾರಕಾಸ್ತ್ರ ಹಾಗೂ ಗಾಂಜಾ ಜಪ್ತಿ ಮಾಡಿದ್ದರು. ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ್,…

ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ

ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ ಎಂ.ಬಿ.ಗಣೇಶ್ ನಿರ್ದೇಶನದ, ಮಹಾತ್ಮ ಪಿಕ್ಚರ್ ಲಾಂಛನದಡಿ ಡಿ.ಶಂಕರಸಿಂಗ್ ನಿರ‍್ಮಾಣ ಮಾಡಿದದೈವಸಂಕಲ್ಪಕಪ್ಪು-ಬಿಳುಪು ಸಾಮಾಜಿಕಚಿತ್ರ ೧೯೫೬ರಲ್ಲಿ ತೆರೆಕಂಡಿತು. ಉದಯಕುಮಾರ್, ಸೂರ್ಯಕಲಾ, ರಾಜಕುಮಾರಿ, ಹೆಚ್.ಪಿ.ಸರೋಜಾ, ಸರೋಜಮ್ಮ, ಲಕ್ಷ್ಮೀದೇವಿ, ಎಂ.ಎಸ್.ಸುಬ್ಬಣ್ಣ, ಟಿ.ಎನ್. ಬಾಲಕೃಷ್ಣ, ಹನುಮಂತಾಚಾರ್, ಮಾ. ಹಿರಣ್ಣಯ್ಯ ಅಭಿನಯಿಸಿದರು.ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಎಂ.ನರೇಂದ್ರಬಾಬು ರಚಿಸಿದರು. ಸಂಭಾಷಣೆಯಲ್ಲಿ ಹಾಸ್ಯಜೋಡಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದುಕೊಟ್ಟರು. ಪಿ.ಶಾಮಣ್ಣ ಸಂಗೀತ ನಿರ್ದೇಶನ ಮಾಡಿದಚಿತ್ರದಲ್ಲಿ ೧೦ ಹಾಡುಗಳನ್ನು ಆಳವಡಿಸಲಾಗಿತ್ತು.ಚಿತ್ರ ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರೀಕರಣಗೊಂಡಿತು. ತಾನೊಂದು ಬಗೆದರೇದೈವತಾ ಬೇರೊಂದ ಬಗೆವುದು ಎಂಬ…

ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಅಗತ್ಯ: ನಟಿ ರಾಜೇಶ್ವರಿ

ಬೆಂಗಳೂರು ಜುಲೈ 24: ಕರೋನಾ ಸಾಂಕ್ರಾಮಿಕದ ಲಾಕ್‌ಡೌನ್‌ ನಿಂದ ತೀವ್ರ ತೊಂದರೆಗೀಡಾಗಿರುವ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ನಟಿ ರಾಜೇಶ್ವರಿ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ  ಆಯೋಜಿಸಲಾಗಿರುವ ಇಂಡಿಯನ್‌ ಆರ್ಟಿಸನ್ಸ್‌ ಬಜಾರ್‌ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಎರಡನೇ ಅಲೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದು ಕರಕುಶಲಕರ್ಮಿಗಳು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಗಾಗ್ಗೆ ಆಯೋಜಿಸಲಾಗುತ್ತಿದ್ದ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಬಹಳಷ್ಟು ಕರಕುಶಲಕರ್ಮಿಗಳಿಗೆ ಅಗತ್ಯ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಒದಗಿಸುತ್ತಿತ್ತು.…

ಪೆಗಸಸ್ ಬೇಹುಗಾರಿಕೆ- ಜನತಂತ್ರದ ಬುಡಮೇಲು ಕೃತ್ಯ

ಪೆಗಸಸ್ ಬೇಹುಗಾರಿಕೆ- ಜನತಂತ್ರದ ಬುಡಮೇಲು ಕೃತ್ಯ ಭೀಮಾ ಕೋರೆಗಾಂವ್ ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ’ನೆಟ್ಟಿದ್ದ’ ನೆಂದು ವಾಷಿಂಗ್ಟನ್ ಪೋಸ್ಟ್ ಈ ವರ್ಷದ ಶುರುವಿನಲ್ಲಿ ವರದಿ ಮಾಡಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತು. ಕಳೆದ ತಿಂಗಳು ಇದೇ ವಿಧಿವಿಜ್ಞಾನ ಸಂಸ್ಥೆ ಆಪಾದಿತರಲ್ಲಿ ಒಬ್ಬರಾದ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್ ನ್ನು ವಿಶ್ಲೇಷಿಸಿತ್ತು.…

ಒಲಿಂಪಿಕ್ಸ್; ಮೊದಲ ದಿನವೇ ಬೆಳ್ಳಿಪದಕ ಗೆದ್ದ ಮೀರಾ

ಟೋಕಿಯೋ,ಜು,೨೪: ಟೋಕಿಯೊ ಒಲಿಂಪಿಕ್ಸ್ -೨೦೨೦ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ ೪೯ ಕೆಜಿ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ೪೯ ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು ೨೦೨ ಕೆಜಿ  ಎತ್ತಿದ್ದಾರೆ. ಚೀನಾದ ಝಿಹೈ ಹು ಒಟ್ಟು ೨೧೦ ಕೆಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿ ಹೊಸ ಒಲಿಂಪಿಕ್…

ಟೋಕಿಯೋದಲ್ಲಿ ವಿದ್ಯುಕ್ತ ಚಾಲನೆಗೊಂಡ ಒಲಿಂಪಿಕ್ಸ್

ಟೋಕಿಯೋ,ಜು,23:ಕೊರೊನಾ ಸಂಕಷ್ಟದ ನಡುವೆ ಮುಂದಾಡಲಾಗಿದ್ದ ಒಲಿಂಪಿಕ್ಸ್ 2020 ಕೊನೆಗೂ ಇಲ್ಲಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಗಮಗಿಸುವ ವಿದ್ಯುತ್ ಅಲಂಕಾರಗಳೊಂದಿಗೆ ವಿದ್ಯುಕ್ತ ಚಾಲನೆ ದೊರಕಿತು. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ 32ನೇ ಒಲಿಂಪಿಯಾಡ್ ಕ್ರೀಡಾಕೂಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ. ಜಪಾನ್‌ನ ಖ್ಯಾತ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಈ ಬಾರಿಯ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಟೋಕಿಯೋದಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಒಲಿಂಪಿಕ್ಸ್ ದೀಪಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ…

ಗುರುಸ್ಸಾಕ್ಷಾತ್ ಪರಂ ಬ್ರಹ್ಮ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಗುರುಸ್ಸಾಕ್ಷಾತ್ ಪರಂ ಬ್ರಹ್ಮ. ಗುರುವು ಸಾಕ್ಷಾತ್ ಪರಬ್ರಹ್ಮ. ಗುರು ದೊಡ್ಡವ. ಅವನು ಬ್ರಹ್ಮ ವಿಷ್ಣು ಮಹೇಶ್ವರಸಮಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗುವವನು ಸದ್ಗುರು. ವ್ಯಾಸ ಶಂಕರ ಮಹಾವೀರ ಬುದ್ಧ ಬಸವ ನಿಜಗುಣ ಸಿದ್ಧಾರೂಢ ಪರಮಹಂಸರಂಥವರು ಸದ್ಗುರುಗಳು. ವ್ಯಾಸರುದಿಸಿದ ದಿನ ಗುರುಪೂರ್ಣಿಮೆ. ಜೀವಕ್ಕೆ ಬೆಲೆ ಬರುವುದು ಸುಜ್ಞಾನದಿಂದ!ಕೆಲಸ ಮಾಡುವ ಮುನ್ನ ಬೇಕು ಅದರ ಜ್ಞಾನ – ಇಚ್ಛೆ – ಕೃತಿ. ಇದು ಜೀವಕ್ರಮ! ಬದುಕ ಬುನಾದಿ, ಬಾಳ ನೀಡುವ ಜ್ಞಾನದಾತ,…

ಮನ ತಾಕುವ ಮಂಡಕ್ಕಿಯ ಪುರಾಣವು…

ಮನ ತಾಕುವ ಮಂಡಕ್ಕಿಯ ಪುರಾಣವು… ತುಂತುರು ಮಳೆಗೆ ನೆಲವೆಲ್ಲಾ ನೆನೆದ ಸೆರಗಂತೆ ತಂಡಿ ಹಿಡಿದು ಎಲ್ಲವನ್ನೂ ಎಲ್ಲರನ್ನೂ ನಡುಗಿಸುತಿತ್ತು.ಸೂರ್ಯ ಹುಟ್ಟಿ ಕೈಗೆ ಕಾಫಿಯ ಬಿಸಿ ತಾಗಿ ಹಬೆಯೊಳೆ ತೇಲಿದಂತೆಲ್ಲಾ ಜೀವಗಳ ಸಂಚಾರ.ಬಿದುರು ಪುಟ್ಟಿ ಎತ್ತಿದೊಡನೆಯೇ ನೆಗೆ ನೆಗೆದು ಕುಣಿಯುತ್ತಾ…ತಾಯಿ ಕೋಳಿಯ ಜೊತೆಗೆ ಅಂಗಳದ ತುಂಬಾ ಹತ್ತಿಯ ಬಣ್ಣ ಬಣ್ಣದ ಉಂಡೆಗಳಂತೆ ಸುಳಿವ ಕೋಳಿಮರಿಗಳು,ಪುಟಾಣಿಗಳನ್ನೇ ಎಗರಿಸಿ ಹೊತ್ತೊಯ್ಯಲೆಂದೇ ಹೊಂಚು ಹಾಕುವ ಕಾಗೆಗಳು,ಎಲ್ಲೆಲ್ಲೋ ದೂರದ ಮೋಡಗಳಿಂದ ಬಾಣದಂತೆ ಬಂದೆರಗೋ ಹದ್ದುಗಳು.., ಕಪ್ಪು ನೀರು ಕವಿದ ತಿಪ್ಪೆಗುಂಡಿಯಲಿ ಪೈಪೋಟಿಗೆ ಬಿದ್ದು ವಟಗುಟ್ಟುವ…

Girl in a jacket