ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್
ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಪ್ಪನೆಯ.. ಕಪ್ಪನೆಯ.. ಎತ್ತರದ ವ್ಯಕ್ತಿ ಹೆಸರು ಹೇಳಿದರೇನೇ ಮಕ್ಕಳೆಲ್ಲಾ ನಡುಗುತ್ತಿದ್ದೆವು. ಅವರ ಹೆಸರು ಕದಿರೆಪ್ಪ ಮಾಸ್ಟರ್. ಶಾಲೆಯ ವಿಸ್ತೀರ್ಣ ಬಹುಶಃ ಒಂದು ಎಕರೆ. ಶಾಲೆ ಚೌಕಾಕಾರದ ಆ ಬಯಲಿನಲ್ಲಿ ಒಂದು ಅಂಚಿನಲ್ಲಿ ಮಧ್ಯಕ್ಕೆ ನೆಲೆಗೊಂಡಿತ್ತು. ಶಾಲೇ ಎಲ್ ಆಕಾರದಲ್ಲಿ ಇತ್ತು. ಮುಂಭಾಗದ ಗೇಟಿನಿಂದ ಶಾಲೆ ಬಹಳ ಸುಂದರವಾಗಿ ಕಾಣುತ್ತಿತ್ತು. ಗೇಟಿನ ಮತ್ತು ಶಾಲೆಯ ಮಧ್ಯದ ಭಾಗದಲ್ಲಿ ಪುಟ್ಟ ಗಣೇಶನ ಗುಡಿ ಇತ್ತು. ಅದಕ್ಕೆ…