ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ!
ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಲೇಖನ. ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ! ಗುರು ದೊಡ್ಡವನು. ಗುರುತರ ಹೊಣೆಯುಳ್ಳವನು. ಜ್ಞಾನವುಳ್ಳವನು. ಅಜ್ಞಾನ ಕಳೆಯುವವನು. ಪ್ರಸಿದ್ಧ ಶ್ಲೋಕವೊಂದು ಹೀಗಿದೆ; ಗುಕಾರಸ್ತ್ವಂಧಕಾರಸ್ತು ರುಕಾರಸ್ತೇಜ ಉಚ್ಯತೇ| ಅಂಧಕಾರ ನಿರೋಧತ್ವಾತ್ ಗರುರಿತ್ಯಭಿಧೀಯತೇ|| ಗುಕಾರ ಕತ್ತಲೆಯ ಪ್ರತೀಕ. ರುಕಾರ ಬೆಳಕಿನ ಪ್ರತೀಕ. ಗೊತ್ತಿಲ್ಲದಿರುವುದು, ತಿಳಿಯದಿರುವುದು, ಅಜ್ಞಾನ. ಇದೇ ಕತ್ತಲೇ = ಅಂಧಕಾರ. ತಿಳಿವು =ಅರಿವು=ಜ್ಞಾನ=ವಿದ್ಯೆಯೇ ಬೆಳಕು! ನಮ್ಮೊಳಗಿನ ಅಜ್ಞಾನ ಕತ್ತಲೆಯನ್ನು ಜ್ಞಾನಬೆಳಕಿನಿಂದ ಹೊಡೆದೋಡಿಸುವುವವನೇ ಗುರು. ಬದುಕಿನಲ್ಲಿ ಜ್ಞಾನದಂಥ ಶ್ರೇಷ್ಠ ಪವಿತ್ರ ವಸ್ತು ಇನ್ನಾವುದೂ…