Girl in a jacket

Daily Archives: July 19, 2021

ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭ

ಟೋಕಿಯೋ, ಜು, ೧೯: ಇಲ್ಲಿ ನಡೆಯಲಿರುವ ಓಲಿಂಪಿಕ್ಷ್ ಕ್ರೀಡೆಗೆ ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ನಿನ್ನೆ ತಲುಪಿದ್ದು ಇಂದು ಮೈದಾನಕ್ಕಿಳಿದು ಅಭ್ಯಾಸದಲ್ಲಿ ತೊಡಗಿದ್ದರು.ಆದರೆ ಈಗ ಕೋವಿಡ್ ಆತಂಕ ಇಲ್ಲಿ ಆವರಿಸಿಕೊಂಡಿರುವುದು ಎಲ್ಲ ಕ್ರೀಡಾಪಟುಗಳಿಗೂ ಭಯ ಆವರಿಸಿದೆ. ಆರ್ಚರ್‌ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್, ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಹಾಗೂ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ತಮ್ಮ ಅಭ್ಯಾಸವನ್ನು…

ನೂತನ ಮೈಲುಗಲ್ಲು ಸಾಧಿಸಿದ ಶಿಖರ್ ಧವನ್

ಕೊಲಂಬೊ,ಜು,೧೯: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‌ನಲ್ಲಿ ಆರಂಭಿಕನಾಗಿ ೧೦ ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ ೮೬ರನ್(೯೫ ಎಸೆತ, ೬ ಬೌಂಡರಿ, ೧ ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ ೧೦,೦೦೦ರನ್ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ ೧೦ ಸಾವಿರ…

ಹಾಡುಹಗಲೇ ಬ್ಯಾಂಕಿಗೆ ನುಗ್ಗಿ ರೌಡಿ ಹತ್ಯೆ

ಬೆಂಗಳೂರು, ಜು.19:ಪತ್ನಿಯ ಜೊತೆಗೆ ಬ್ಯಾಂಕ್ ಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಮಾಡಿದ ಘಟನೆ ಹಾಡುಹಗಲೆ ನಡೆದಿದೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ ಯೂನಿಯನ್ ಬ್ಯಾಂಕ್ ನಲ್ಲಿ ರೌಡಿ ಬಬ್ಲು ಮತ್ತು ಆತನ ಪತ್ನಿ ವ್ಯವಹಾರ ನಡೆಸುತ್ತಿದ್ದಾಗ ಈ ಕೃತ್ಯ ಜರುಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಪತ್ನಿ ಜತೆ ಕೋರಮಂಗಲ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆ (ಕಾಪೆರ್ರೇಷನ್ ಬ್ಯಾಂಕ್)ಗೆ ಬಬ್ಲು ಬಂದಿದ್ದನು. ಆತನನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಬ್ಯಾಂಕ್‍ನೊಳಗೆ…

ಅಧಿಕಾರ ಹೋದರೆ ಹೋಗಲಿ,ಸಂಘಟನೆ ಕೆಲಸಮಾಡ್ತೀನಿ; ಈಶ್ವರಪ್ಪ ಅಕ್ರೋಶ

ಶಿವಮೊಗ್ಗ,ಜು,19: ಮಂತ್ರಿಸ್ಥಾನ ಹೋದರೆ ಹೋಗಲಿ. ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ. ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ಮಂತ್ರಿ ಸ್ಥಾನ ಇಲ್ಲಾಂದರೆ ಸಂಘಟನೆಯ ಕೆಲಸ ಮಾಡ್ತೀನಿ. ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದರು. ಬಿಜೆಪಿ ರಸಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ಭಹಿರಂಗ ಗೊಂಡ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಪದಚ್ಯುತರಾಗಲಿದ್ದಾರೆ. ಈಶ್ವರಪ್ಪ, ಶೆಟ್ಟರ್ ಟೀಂ ಹೊರ ಹೋಗುತ್ತಾರೆ. ಮೂವರಲ್ಲಿ ಒಬ್ಬರು ಅಧಿಕಾರ…

೨೬ಕ್ಕೆಬಿಎಸ್‌ವೈ ರಾಜೀನಾಮೆ?

ಬೆಂಗಳೂರು,ಜು,೧೯: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ೨೬ ಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದು ವಲ್ಲದ ಮನಸ್ಸಿನಿಂದಲೇ ಅಂದು ಸಿಂಎಂ ಸ್ಥಾನದಿಂದ ನಿರ್ಗಮಿಸಲಿದ್ದಾರೆ ಎನ್ನುವುದು ಬಿಜೆಪಿಯ ಖಚಿತ ಮೂಲಗಳು ತಿಳಿಸಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಆಡಿಯೋ ಬಹಿರಂಗಗೊಡ್ಡಿದ್ದ ಅದರಲ್ಲಿ ನೀಡಿರುವ ಹೇಳಿಕೆಗಳು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಔತಣಕೂಟ ಏರ್ಪಾಟ್ ಮಾಡಿರುವ ವಿಷಯಗಳು ಈ ನಿರ್ಧಾರವನ್ನು ಖಚಿತಪಡಿಸುತ್ತವೆ. ಅಂದು ಬಿಜೆಪಿ ಶಾಸಕಾಂಗ ಸಭೆ ನಡೆಸಿ…

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ಸಿದ್ಧಸೂಕ್ತಿ : ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ. ಎನಗಿಂತ ಕಿರಿಯರಿಲ್ಲ ಎನ್ನುವ ವಿನಮ್ರರು ವಿರಳ. ಎನಗಿಂತ ಹಿರಿಯರಿಲ್ಲ. ಎನ್ನ ಸಮನಾರು? ಎಂದು ಅಹಮಿಕೆ ಬೀಗುವ ಜನರಧಿಕ! ತನ್ನ ತನ್ನವರ ಅಲ್ಪ ಸಾಧನೆಯನ್ನು ಉಬ್ಬಿಸುವರಿಂತು:ತುರ್ತು ವಾಹನಕ್ಕೆ ಕರೆ ಮಾಡಿ ಕಳಿಸಿದೆ ಬದುಕಿದ. ಇಲ್ಲದಿರೆ ಆತನ ಸಾವು ಖಚಿತ! ಅವನಿಗೆ ಸಾವಿರ ಕೊಟ್ಟು ಓದಿಸಿದೆ. ಇಲ್ಲದಿರೆ ಆತ ಅಧಿಕಾರಶೂನ್ಯ! ಹೆಜ್ಜೆ ಹೆಜ್ಜೆಗೂ ಕೇಳುವುದು, ಲೆಕ್ಕವಿಲ್ಲದ ಈ ಮಾತು! ಜಾತ್ರೆ ಕಾರ್ಯಕ್ರಮಗಳ ಪತ್ರಿಕೆ ಬ್ಯಾನರ್ ಗಳಲ್ಲಿ ದೇವರು – ಮುಖ್ಯಸ್ಥರ ಚಿತ್ರದ…

Girl in a jacket