ಮತ್ತಷ್ಟು ನಿಯಮ ಸಡಿಲ; ಚಿತ್ರಮಂದಿರ, ಕಾಲೇಜುಗಳಿಗೆ ಅವಕಾಶ
ಬೆಂಗಳೂರು,ಜು,೧೮:ಕೋವಿಡ್ ನಿಯಮಗಳನ್ನು ಹಂತ ಹಂತವಾಗಿ ಸಡಿಲಿಸುತ್ತಾ ಬರುತ್ತಿರುವ ಸರ್ಕಾರ ಈಗ ಮತ್ತಷ್ಟು ಅನ್‌ಲಾಕ್ ಪ್ರಕ್ರಿಯೆಯನ್ನುಮಾಡಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಇಂದು ಸಚಿವರುಗಳ ಜೊತೆ ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಡೆದ ಸಭೆಯಲ್ಲಿ ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ, ಕೆಲವು ನಿಯಮಗಳನ್ನು ಸಡಿಲ ಮಾಡಿದ್ದು ಪ್ರಯೋಜನವಾಗಿದೆಯಾ ಕೋವಿಡ್ ಸ್ಥಿತಿಗತಿ ಹೇಗಿದೆ ಎನ್ನುವುದರ ಬಗ್ಗೆ ವಿವರವಾಗಿ ಚರ್ಚಿಸಲಾಯ್ತು. ನಂತರ ಅನ್‌ಲಾಕ್?ನ ಮುಂದಿನ ಹಂತದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರಂತೆ ಸಚಿವರು ಹಾಗು…