ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ
ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ ಮಳೆಕೊಯ್ಲು ಎಂಬ ಪದ್ಧತಿ ಪ್ರಾಚೀನವೆಂಬುದು ತಿಳಿದ ಸಂಗತಿ. ಮಳೆಯ ನೀರನ್ನು ಅಡ್ಡಗಟ್ಟಿ ತಡೆದು ವರ್ಷಪೂರ್ತಿ ಬಳಸಿಕೊಂಡ ಪ್ರಾಚೀನರ ತಿಳುವಳಿಕೆ ಅಪರಿಮಿತವಾದದ್ದು, ವಿಜಯನಗರ ಕಾಲದಲ್ಲಿ ಇದು ಸ್ವಲ್ಪ ಹೆಚ್ಚೇ ಇತ್ತು. ಇದಕ್ಕೆ ಸಾಮ್ರಾಜ್ಯದ ಹರಹು, ವಿಸ್ತಾರ ಮತ್ತು ಸಂಪನ್ಮೂಲಗಳು ಕಾರಣವಿರಬೇಕು, ಈ ಅವಧಿಯಲ್ಲಿ ಅರಸ ಸಾಮಂತ, ಮಾಂಡಲಿಕ, ಅಧಿಕಾರಿಗಳಿಂದ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ, ಇದಕ್ಕೆ ಲಕ್ಷ್ಮೀಧರನ ಶಾಸನದಲ್ಲಿರುವ “ಕೆರೆಯಂ ಕಟ್ಟಿಸು ಭಾವಿಯಂ ಸವೆಸು ದೇವಾಗಾರಮಂ ಮಾಡಿಸು ಸೆರೆಯೊಳ್…