ಐಷರಾಮಿ ಕಾರುಗಳ ವಂಚಕರ ಬೃಹತ್ ಜಾಲ ಭೇಟೆಯಾಡಿದ ಸಿಸಿಬಿ ಪೊಲೀಸರು
ಬೆಂಗಳೂರು,ಜು.14- ಐಷಾ ರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರು ಪಡೆದು ಒತ್ತೆಯಿಡುತ್ತಿದ್ದ ಬೃಹತ್ ಜಾಲವನ್ನು ಭೇಟೆಯಾಡಿರುವ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿ 5 ಕೋಟಿ ಮೌಲ್ಯದ 39 ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ನಗರದ ನಿವಾಸಿಗಳಾದ ನಸೀಬ್, ಮೊಹಮ್ಮದ್ ಅಜುಂ ಮತ್ತು ಮಹೀರ್ ಖಾನ್ ಬಂಧಿತರು. ಆರೋಪಿಗಳು ಐಷಾರಾಮಿ ಕಾರುಗಳನ್ನು ಮರುಮಾರಾಟ ಮಾಡಿಸಿಕೊಡುತ್ತೇವೆ ಎಂದು ಮಾಲೀಕರನ್ನು ನಂಬಿಸಿ ಅವರಿಂದ ಕಾರುಗಳನ್ನು ಪಡೆದುಕೊಳ್ಳುತ್ತಿದ್ದರು. ತದನಂತರ ಮಾಲೀಕರ ಅನುಮತಿ ಇಲ್ಲದೆ ಬೇರೆಯವರ ಬಳಿ ಒತ್ತೆ ಇಡುತ್ತಿದ್ದರು.…