Girl in a jacket

Daily Archives: July 12, 2021

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 14.33 ಕೋಟಿ ರೂಪಾಯಿ

ಬೆಂಗಳೂರು,ಜು,12:ಒಟ್ಟು 14. 33 ಕೋಟಿ ರೂಪಾಯಿ ವೆಚ್ಚದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. . ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು. 2021- 22 ನೇ ಸಾಲಿಗೆ ಅನ್ವಯವಾಗುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕಾಗಿನೆಲೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ವಸ್ತುಸಂಗ್ರಹಾಲಯದ ಮುಂದುವರಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು, ಬಾಡ ಗ್ರಾಮದಲ್ಲಿ ಸಂಗೀತ ಕಾರಂಜಿ ಹಾಗೂ ಕನಕದಾಸರ ಅರಮನೆಯ ದರ್ಬಾರ್ ಹಾಲ್…

ಎಸ್ಸೆಸ್ಸೆಲ್ಸಿ: ಭರವಸೆ ಮೂಡಿಸಿದ ತೀರ್ಪು-ಸುರೇಶ್ ಕುಮಾರ್

ಬೆಂಗಳೂರು,ಜು,12: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಉಚ್ಚ ನ್ಯಾಯಾಲಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪುರಸ್ಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಗೆ ಭರವಸೆ ಮೂಡಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪರೀಕ್ಷೆ ಸಂಬಂಧದಲ್ಲಿ ಈ ವರ್ಷ ಕೈಗೊಂಡಿರುವ ಸರಳೀಕೃತ ಪರೀಕ್ಷಾ ವ್ಯವಸ್ಥೆ…

ದೇಶದಲ್ಲೆ ಮೊದಲಬಾರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ

ಬೆಂಗಳೂರು,ಜು,12:ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ದಿನಾಂಕ 13 ಜುಲೈ 2021 ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ scene of crime officer ಹುದ್ದೆಗಳ ಆದೇಶ ಪ್ರತಿಯನ್ನು ಕೊಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ದೇಶದಲ್ಲಿಯೇ…

ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ

ಚಿಕ್ಕಮಗಳೂರು,ಜು,12: ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ(43) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ಚಿಕ್ಕಮಗಳೂರಿನ ಗೋಣಿಬೀಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು. ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ…

ಜುಲೈ 19 ರಿಂದ ಸಂಸತ್ ಅಧಿವೇಶನ

ನವದೆಹಲಿ,ಜು,12: ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 19ರಿಂದ ಆರಂಭವಾಗಲಿದೆ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಸೋಮವಾರ ಮಾಹಿತಿ ನೀಡಿದ್ದಾರೆ. 19 ದಿನಗಳ ಕಾಲ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್‌ 13ಕ್ಕೆ ಅಂತ್ಯಗೊಳ್ಳಲಿದೆ ಎಂದು ಬಿರ್ಲಾ ತಿಳಿಸಿದ್ದಾರೆ. ಸಾಮಾನ್ಯವಾಗಿ ಮುಂಗಾರು ಅಧಿವೇಶನವು ಜುಲೈ ಮೂರನೇ ವಾರದಲ್ಲಿ ಆರಂಭವಾಗಿ, ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಕೊನೆಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಶಿಫಾರಸಿನ ಮೇಲೆ ಅಧಿವೇಶನದ ಅವಧಿಯನ್ನು ನಿಗದಿಪಡಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ಕೋವಿಡ್‌…

ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ

ಹೊಂಬಾಳೆ ಫಿಲಂಸ್‌ನ ಮುಂದಿನ ಚಿತ್ರ ಘೋಷಣೆಯಾಗಿದ್ದು ಇದರ ನಿರ್ದೆಶನದ ಜವಾಬ್ದಾರಿ ಜೊತೆಗೆ ನಾಯಕ ಕೂಡಾ ರಕ್ಷಿತ್ ಶೆಟ್ಟಿ ಜವಾಬ್ದಾರಿ ಹೊತ್ತುಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಚಿತ್ರದ ಹೆಸರು ’ರಿಚರ್ಡ್ ಆಂಟನಿ – ಲಾರ್ಡ್ ಆಫ್ ದ ಸೀ’ ಇದು ಚಿತ್ರದ ಟೈಟಲ್ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಅಷ್ಟೆ ವಿಶೇಷವಾಗಿ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತು ಅತ್ಯಂತ ಕ್ರಿಯಾಶೀಲತೆಯನ್ನು ಇದರಲ್ಲಿ ತೊಡಗಿಸಲಿದ್ದಾರೆ ಎನ್ನುವುದು ಈಗಿನ ಹೊಸ ಸುದ್ದಿ. ಕೆಜಿಎಫ್, ಸಲಾರ್…

ಶಿವಣ್ಣಗೆ ೫೯ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ ಎಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ,ಅವರ ಎನರ್ಜಿ ಇನ್ನೂ ಯುವಕರಂತೆಯೇ ಇದೆ ಅವರ ಚಿತ್ರಗಳಲ್ಲಿ ಅವರ ಲವಲವಿಕೆ ನೋಡಿದರೆ ಹಾಗೆ ಅನಿಸದೆ ಇರಲಾರದು ಸದಾ ನಗು ನಗುತ್ತಲೇ ಇರುವ ಅವರಿಗೆ ಇಂದು ೫೯ ನೇ ಜನ್ಮದಿನದ ವಿಶೇಷ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳಿಗೂ ಕೂಡ ಯಾರು ಮನೆ ಮುಂದೆ ಬರಬೇಡಿ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ ಅಲ್ಲದೆ. ಎಲ್ಲರಿಗೂ ಅವರ ಆರೋಗ್ಯ…

ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಶ್ವಥ್ ನಾರಾಯಣ್

ಹುಬ್ಬಳ್ಳಿ,ಜು,೧೨: ಇಲ್ಲಿನ ಆರಾಧ್ಯ ದೈವವಾದ ಸಿದ್ಧಾರೂಢ ಮಠಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್‌ನಾರಾಯಣ ಅವರು ಭೇಟಿ ನೀಡಿ ಸಿದ್ಧಾರೂಢರು ಮತ್ತು ಗುರುನಾಥರೂಢರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು ಹುಬ್ಬಳ್ಳಿ ಪ್ರವಾಸದಲ್ಲಿರುವ ಅವರು ಇಲ್ಲಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಮಧ್ಯೆಯೇ ಬೆಳಂಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ. ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಡಿಸಿಎಂ ಅಶ್ವಥ್ ನಾರಾಯಣ್ ನಗರದಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ ಕರ್ನಾಟಕ ವಿಶ್ವ…

ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಮಹಿಳೆ-ದೂರು

ಮೈಸೂರು,ಜು,೧೨: ಚಾಲೇಂಜಿಂಗ್ ಸ್ಟಾರ್ ಸ್ಟಾರ್ ದರ್ಶನ್ ತಮ್ಮ ಹೆಸರಿನಲ್ಲಿ ಮಹಿಳೆಯೊಬ್ಬಳು ವಂಚನೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಮೂಲಕ ದರ್ಶನ್ ಹೆಸರಿನಲ್ಲಿ ಇರುವ ಯಾವ ಆಸ್ತಿ ನಕಲಿ ಮಾಡಲಾಗಿದೆ ಯಾಕೆ ಈ ಘಟನೆ ನಡೆದಿದೆ ಇದರ ಹಿಂದೆ ಇರುವವರು ಯಾರು ಎನ್ನುವ ಕುತೂಹಲ ಕೆರಳಿಸಿದೆ. ೧೫ ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು ೨೫ ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಆಪ್ತ ರಾಬರ್ಟ್…

ರಾಜಸ್ಥಾನದಲ್ಲಿ ಸಿಡಿಲು ಬಡೆದು 11 ಮಂದಿ ಸಾವು

ಜೈಪುರ,ಜು:ನಿನ್ನೆ ರಾತ್ರಿ ಸಿಡಿಲು ಬಡೆದು 11ಮಂದಿ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡ ಘಟನೆ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್‌ನಲ್ಲಿ ಜರುಗಿದೆ. ಅಮೆರ್‌ ಪ್ಯಾಲೆಸ್‌ನ ವಾಚ್‌ ಟವರ್‌ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್‌ ಟವರ್‌ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಸಿಡಿಲು ಬಡಿದಾಗ ವಾಚ್‌ ಟವರ್‌ ಮೇಲೆ 27 ಜನರು ಇದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

     ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ, ಎಚ್ಚರ ತಪ್ಪಿ, ಅಸಂಬದ್ಧ ಮಾತಾಡಿ, ಒದೆ ತಿಂದು, ರಸ್ತೆ – ಚರಂಡಿಯಲ್ಲಿ ಬಿದ್ದು ಉರುಳಾಡಿ, ತನ್ನ – ಕುಟುಂಬದ ಮರ್ಯಾದೆಯ ಹರಾಜಿಗಿಕ್ಕುವನು! ಮತ್ತು…

Girl in a jacket