ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ
ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮಳೆ ನೀರು ಹಿಡಿಯಿರಿ(ಕ್ಯಾಚ್ ದ ರೈನ್)” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿಶ್ವ ಜಲದಿನವನ್ನು ಆಚರಿಸಿದ್ದರು. ಅಲ್ಲದೆ ಜಲ ಪ್ರಮಾಣ ವಚನವನ್ನೂ ಘೋಷಿಸಿದ್ದರು. ಈ ಅಭಿಯಾನವು ನೀರಿನ ಅಗತ್ಯವನ್ನು ಸಾರಿಹೇಳುವ ಮಳೆಕೊಯ್ಲು ಕಾರ್ಯಕ್ರಮವೇ ಆಗಿದ್ದಿತು. ಮಳೆಕೊಯ್ಲು ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅನುಸರಿಸಿ ಅಳವಡಿಸಿಕೊಂಡ ಆಧುನಿಕ ಪರಿಭಾಷೆ. ಪರಿಸರ ಮತ್ತು ಹವಾಮಾನದಲ್ಲಾದ ವ್ಯತಿರಿಕ್ತ ಬದಲಾವಣೆಯಿಂದ ಪ್ರಚಲಿತಗೊಂಡ ಪದ್ಧತಿಯೂ ಹೌದು, ಇಡೀ ಭೂಮಂಡಲವು ಮಾನವ ನಿರ್ಮಿತ…