ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ
ಲಿಂಗಾಯತ ವೀರಶೈವ ಕೇಂದ್ರಿತ ಪಕ್ಷವಾಗಿರುವ ರಾಜ್ಯ ಬಿಜೆಪಿ ಈಗ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಒಕ್ಕಲಿಗ ಪ್ರದೇಶವನ್ನು ಆರಿಸಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕರಿಸಿರುವ ಒಕ್ಕಲಿಗ ಸಮುದಾಯವನ್ನು ತನ್ನಿಚ್ಚೆಯ ರಾಜಕೀಯಕ್ಕೆ ಬಳಸಿಕೊಳ್ಳುವ ಅದರ ಯತ್ನಕ್ಕೆ ಪಕ್ಷದ ಒಳಗಿನಿಂದಲೇ ಕಿರಿಕಿರಿ ಎದುರಾಗಿದೆ. ಯೋಗೇಶ್ವರ್ ಸಿಡಿಸಿರುವ “ತ್ರಿಪಕ್ಷ ಸರ್ಕಾರ ಯಡಿಯೂರಪ್ಪನವರದು” ಎಂಬ ಬಾಂಬ್‌ನ ಸ್ವಿಚ್ ಎಲ್ಲಿದೆ ಮತ್ತು ಅದನ್ನು ಆನ್ ಆಫ್ ಮಾಡುತ್ತಿರುವವರು ಯಾರೆನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ ಲಿಂಗಾಯತ-ವೀರಶೈವ ಗದ್ದಲಕ್ಕೆ ಇದುವರೆಗೆ ಸೀಮಿತವಾದಂತಿದ್ದ…