ಕುತೂಹಲ ಕೆರಳಿಸಿದ ವಿಶ್ವನಾಥ್,ಯತ್ನಾಳ್ ಭೇಟಿ
ಬೆಂಗಳೂರು,ಜು,೦೫:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗಬೇಕು ಎಂದು ಒತ್ತಾಯಿಸುತ್ತಿರುವ ಇಬ್ಬರು ಬಿಜೆಪಿ ನಾಯಕರಾದ ಎಚ್.ವಿಶ್ವನಾಥ್ ಮತ್ತು ಬಸವರಾಜ್ ಪಾಟೀಲ್ ಯತ್ನಾಳ್ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸುಮಾರು ಹೊತ್ತು ಈ ಉಭಯನಾಯಕರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದ್ದು ಮುಂದಿನ ಬೆಳವಣಿಗೆಗಳಿಗೆ ಕಾರಣ ಮತ್ತು ತಂತ್ರಗಳ ಕುರಿತು ಚರ್ಚಿಸಿದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ. ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸುತ್ತೂರು ಮಠಕ್ಕೆ ಹೋಗಿದ್ರಾ?…