Girl in a jacket

Daily Archives: July 4, 2021

ಮೇಕೆದಾಟು ಯೋಜನೆ ಮಾಡಬೇಡಿ ತಮಿಳುನಾಡು ಸಿಎಂ ಪತ್ರ

ಚೆನ್ನೈ,ಜು,04: ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬೇಡಿ ಎಂದು ತಮಿಳುನಾಡು ಸಿ.ಎಂ.ಸ್ಟಾಲಿನ್ ಕರ್ನಾಟಕ ಸಿಎಂಗೆ ಪತ್ರ ಬರೆದಿದ್ದಾರೆ. ಮೇಕೆ ದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗಲಿದೆ ನಮ್ಮ ಲ್ಲೂ ನೀರಿಗೆ ಅಭಾವವಿದೆ. ನಾವು ಪ್ರತಿನಿತ್ಯ ಪರದಾಡುತ್ತಿದ್ದೇವೆ. ನಿಮ್ಮ ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ ಎಂಬುದು ಸಮಂಜಸವಲ್ಲ ಎಂದಿದ್ದಾರೆ. ಆ ಪತ್ರದಲ್ಲಿ ಎರಡೂ ರಾಜ್ಯಗಳ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯಬೇಕು. ಹೀಗಾಗಿ, ಮೇಕೆದಾಟು ಯೋಜನೆಗೆ ಯಾವುದೇ ವಿರೋಧ ವ್ಯಕ್ತಪಡಿಸಬಾರದು. ಎರಡು ರಾಜ್ಯಗಳ ಅಧಿಕಾರಿಗಳು ಜತೆಗೂಡಿ ದ್ವಿಪಕ್ಷೀಯ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು.…

ಎಸ್.ಎಸ್.ಎಲ್.ಸಿ.ಪರೀಕ್ಷೆ ನಡೆಯಬಾರದು; ವಿಶ್ವನಾಥ್

ಮೈಸೂರು, ಜು,೦4: ಎಸ್ ಎಸ್ ಎಲ್ ಸಿ‌ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಅಕ್ಷರ ,ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು, ಎಚ್ಚರಿಸಿದರು. ಪಿಯುಸಿ ಪರಿಕ್ಷೆ ಬೇಡ ಅಂತಾ ಹೇಳಲಾಗಿದೆ. ಶಿಕ್ಷಣ ಸಮಿತಿಯ ವರದಿ ಏನು‌ ಹೇಳಿದೆ ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ ?…

ಹಲ್ಲೆ ಪ್ರಕರಣ; ಮಾಜಿ ಸಚಿವ ಪರಮೇಶ್ವರ್ ನಾಯಕ್ ಸಹೋದರ ಬಂಧನ

ವಿಜಯನಗರ, ಜು,04;ವೃದ್ದನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಸಯಕ್ ಸಹೋದರನನ್ನು ಬಂಧಿಸಲಾಗಿದೆ. ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ ಮೇಲೆ ಪಿ. ಟಿ. ಶಿವಾಜಿ ನಾಯ್ಕ ಹಲ್ಲೆ ಮಾಡಿದ್ದರು. ಹಲ್ಲೆಯಿಂದಾಗಿ ಗಾಯಗೊಂಡಿದ್ದ ಶರಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಾಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ…

ಕನ್ನಡ ಪಂಡಿತರ ಕನ್ನಡ ಸೇವೆ

ಕನ್ನಡ ಪಂಡಿತರ ಕನ್ನಡ ಸೇವೆ ಅಂದು ಜುಲೈನ ಒಂದು ಗುರುವಾರದ ಮಧ್ಯಾಹ್ನ. ಹೊರಗೆ ಜಿಟಿಪಿಟಿ ಸುರಿಯುತ್ತಿದ್ದ ಮುಂಗಾರಿನ ಮಳೆ ಊಟಕ್ಕಾಗಿ ಮನೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳ ಆತಂಕವನ್ನು ಸಹಜವಾಗಿಯೇ ಹೆಚ್ಚು ಮಾಡಿತ್ತು. ಊಟದ ಅವಧಿಗಿಂತ ಮೊದಲಿನ ಅಂದರೆ ಬೆಳಗಿನ ಶಾಲಾ ಅವಧಿಯ ಕೊನೆಯ ಪೀರಿಯಡ್ ಪ್ರಾರಂಭವಾಗಿತ್ತು. ನಾವು ಒಂಬತ್ತನೇ ತರಗತಿಯ “ಎ” ವಿಭಾಗದ ವಿದ್ಯಾರ್ಥಿಗಳಿಗೆ ಅಂದು ವೇಳಾಪಟ್ಟಿಯ ಪ್ರಕಾರ ಕನ್ನಡ ತರಗತಿ ಇತ್ತು. ನಮಗೆ ಆ ವರ್ಷ ಶಾಲೆ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳು ಕಳೆದಿದ್ದರೂ ಕನ್ನಡ ತರಗತಿಗಳು…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

– ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                        ‌‌‌‌‌             ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ,…

Girl in a jacket