ಸುಧೀಂದ್ರಹಾಲ್ದೊಡ್ಡೇರಿ ಇನ್ನೂ ನೆನಪು
ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗಗಳನ್ನು ಪರಿಚಯಿಸಲು ಸುಧೀಂದ್ರ ವಹಿಸುತ್ತಿದ್ದ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ಅಸಾಧಾರಣವಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ 1961ರ ಡಿಸೆಂಬರ್ 3ರಂದು ಜನಿಸಿದರು. ಕನ್ನಡ ಪತ್ರಕರ್ತ ದಿವಂಗತ ನಾಗೇಶರಾಯರು ಇವರ ತಂದೆ. ಸುಧೀಂದ್ರ ಹಾಲ್ದೊಡ್ಡೇರಿ ತಂದೆಯವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದುತ್ತಾ ಬೆಳೆದರು. ಅವುಗಳಲ್ಲಿರುವ ವಿಜ್ಞಾನ…