ಈಸಬೇಕು ,ಇದ್ದು ಜಯಿಸಬೇಕು
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಈಸಬೇಕು, ಇದ್ದು ಜಯಿಸಬೇಕು. ಹಳ್ಳ ನದಿ ಕೆರೆ ನೀರ ದಾಟಲು ಈಸಬೇಕು. ಈಜು ಬಾರದವರು ನೀರಲಿ ಬಿದ್ದರೆ ಕಷ್ಟ.ಮುಳುಗಿದರೆ ಮುಗಿದಂತೆ! ಈಸಿ ದಾಟಿದರೆ ಮುಂದೆ ಸುಂದರದ ಬದುಕು! ಪ್ರಪಂಚ ಸಾಗರ! ದಾಟಲು ಈಸಬೇಕು, ನಿರಂತರ ಹೋರಾಡಬೇಕು! ಆಗಲೇ ಗೆಲುವು! ಗೆದ್ದವರಿಗಿದೆ ನೀರಾಚೆಯ ಸುಖ ಸಾಗರ! ಸವಿಯಲು ಇರಬೇಕು, ಇದ್ದು ಜಯಿಸಬೇಕು! ಇಲ್ಲದವರಿಗೆ ಏನಿಲ್ಲ. ಬದುಕುವಾಶೆಯುಂಟು! ಎದುರಾಗುವ ರೋಗ ಬಡತನ ಸಾಲ ಹಗೆ ಧಗೆ ಕಾಲೆಳೆತ ವಿಷಸಂಕೋಲೆಗೆ ಸುಸ್ತಾಗಿ ಕೊನೆಯಾಗುವರು ಕೆಲರು!…