Girl in a jacket

Daily Archives: June 28, 2021

ಸಲ್ಯೂಟ್ ವಾರಿಯರ್ಸ್‌ ಆಲ್ಬಂ ಸಾಂಗ್‌ಗೆ ಎಸ್‌ಪಿ, ಸಿಇಒ ಚಾಲನೆ

ಚಿತ್ರದುರ್ಗ,ಜೂ,28: ಸರ್ಕಾರ ಕೋರೋನಾ ಲಾಕ್‌ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೋನಾ ಮುಕ್ತ ಮಾಡಲು ಸನ್ನದ್ಧವಾಗಿದೆ ಈ ಹಿನ್ನೆಲೆಯಲ್ಲಿ ಸಲ್ಯೂಟ್ ವಾರಿಯರ್ಸ್‌ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೋನಾ ಕುರಿತ ಜಾಗೃತಿ ಗೀತೆ ಸಲ್ಯೂಟ್ ವಾರಿಯರ್ಸ್‌ ಕನ್ನಡ ಆಲ್ಬಂ ಸಾಂಗ್ ಶೂಟಿಂಗ್‌ಗಾಗಿ ಹಮ್ಮಿಕೊಂಡಿದ್ದ ಮೂಹೂರ್ತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.…

ಬಿಡಿಎ ಉದ್ದೇಶಿತ ನಿವೇಶನ,ಪ್ಲಾಟ್ ಗಳ ಶುಲ್ಕಹಿಂಪಡಿಯಲು ಎಫ್ ಕೆಸಿಸಿ ಐ ಮನವಿ

ಬೆಂಗಳೂರು,ಜೂ,28:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಮತ್ತು ಪ್ಲಾಟ್ ಗಳ ಖರೀದಿ ಶುಲ್ಕ ಹೆಚ್ಚಳಕ್ಕೆ ಮುಂದಾಗಿದ್ದು ಅದನ್ನು ಹಿಂಪಡಿಯುವಂತೆ ಕರ್ನಾಟ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ರವರು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗ 2ನೇ ಅಲೆಯಿಂದಾಗಿ ಕೈಗಾರಿಕೋದ್ಯಮಿಗಳು ವ್ಯಾಪಾರಸ್ಥರು, ಮಧ್ಯಮ ವರ್ಗದವರು ಹಾಗೂ ಜನಸಾಮಾನ್ಯರು ಈಗಾಗಲೇ ಆರ್ಥಿಕ ನಷ್ಟ ಅನುಭವಿಸಿದ್ದು,…

ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ಕೂಟದಲ್ಲಿ ಸಾಧನೆ ತೋರಿದ ಕರ್ನಾಟಕ ಪೊಲೀಸ್..

ಬೆಂಗಳೂರು,ಜೂ,28:ಪಂಜಾಬ್ ನ ಪಾಟಿಯಾಲದಲ್ಲಿ ನಡೆದ 60ನೇ ಅಂತ ರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದ ಕ್ರೀಡಾಪಟು  ಬಿ. ಕೆ. ಕುಮಾರ್ ಸ್ವಾಮಿಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನಗಳಿಸಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ  ಪುರುಷರ 800 ಮೀಟರ್ ಓಟದಲ್ಲಿ 1 ನಿಮಿಷ 51.86 ಸೆಕೆಂಡ್ ಗಳಲ್ಲಿ ಗುರಿತಲುಪಿ ಉತ್ತಮ ಸಮಯವನ್ನು ನೀಡುವುದರ ಮೂಲಕ 5ನೇ ಸ್ಥಾನ ಪಡೆದು  ರಾಜ್ಯಕ್ಕೆ 2 ಅಂಕಗಳನ್ನು ತಂದು ಕೊಟ್ಟು ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತಾರಾಜ್ಯ ಕ್ರೀಡಾಂಗಣದಲ್ಲಿ…

ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ

ನವದೆಹಲಿ,ಜೂ,28:ಕೊರೋನ ಸೋಂಕಿತರ ಸಂಖ್ಯ ಇಳಿಮುಖವಾಗುತ್ತಿದ್ದು ಕೊರೊನಾ ಬಾಧಿತ ವಲಯಗಳಿಗೆ ಕೇಂದ್ರ ಸರ್ಕಾರ 1.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸುದ್ದಿಗೋಷ್ಡಿ ನಡೆಸಿ ವಿವಿರ ನೀಡಿದರು. ಕೊರೋನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ, ವೈದ್ಯಕೀಯ ಮೂಲಸೌಕರ್ಯಕ್ಕೆ 50 ಸಾವಿರ ಕೋಟಿ ರೂ. ಉಳಿದ ವಲಯಗಳಿಗೆ 60 ಸಾವಿರ ಕೋಟಿ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು. 1.5 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್…

ಜುಲೈ 19,22ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ

ಬೆಂಗಳೂರು,ಜೂ,28:ಕೊನೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಸಿಯೇ ತೀರಬೇಕೆಂದು ಹಠ ತೊಟ್ಟಿರುವ ಶಿಕ್ಷಣ ಸಚಿವರು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಜುಲೈ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದು ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ್ದಾರೆ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ 19 ರಂದು…

ದೀಪಿಕಾಗೆ ಒಂದೇ ದಿನ ಮೂರು ಚಿನ್ನದ ಪದಕ

ಪ್ಯಾರೀಸ್,ಜೂ,೨೮:ನಿನ್ನೆ ನಡೆದ ಮೆಗಾ-ಈವೆಂಟ್ ಅರ್ಚರಿ ವಿಶ್ವಕಪ್‌ನ ಹಂತ ಮೂರರಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಗೈದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆಯುವ ಈ ಈವೆಂಟ್‌ನಲ್ಲಿ ದೀಪಿಕಾ ಆಟ ಭರ್ಜರಿಯಿತ್ತು .ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ೬-೦ ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮಿಶ್ರ ಫೈನಲ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿ ಅರ್ಚರಿಯಲ್ಲಿ ಭಾರತದ ಅತ್ಯುತ್ತಮ ಪದಕ ಭರವಸೆಯಿರುವ ದೀಪಿಕಾ ಮತ್ತು…

ಮಲೇರಿಯಾ ನಿರ್ಮೂಲನಕ್ಕೆ ವಿದ್ಯಾರ್ಥಿಗಳ ಸಹಕಾರ ಮುಖ್ಯ

ಶಿಕಾರಿಪುರ,ಜೂ,೨೮: ಸಮುದಾಯದಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿ ಸುರೇಶ್ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ೨೦೨೧ ನೇ ಸಾಲಿನ ತಾಲ್ಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ . ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣುಸೊಳ್ಳೆ ಯಿಂದ ಹರಡುತ್ತಿದ್ದು ಸೊಳ್ಳೆ ನಿಯಂತ್ರಣಕ್ಕೆ ಸಮುದಾಯವು ಸತತವಾಗಿ ಇಲಾಖೆಯೊಂದಿಗೆ ಕೈಜೋಡಿಸಬೇಕು. ಈ ಸೊಳ್ಳೆಗಳು…

ಜಮ್ಮು ಕೇಂದ್ರಿತ ಸ್ಥಳಗಳ ಮೇಲೆ ಇದೆ ಮೊದಲಬಾರಿ ಡ್ರೋನ್ ಬಳಕೆ

ಜಮ್ಮು,ಜೂ28: ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನಕೇಂದ್ರಿತ ಉಗ್ರರು ಇದೇ ಮೊದಲ ಬಾರಿಗೆ ಡ್ರೋನ್‌ಗಳನ್ನು ಬಳಸಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಬೆಳಿಗ್ಗಿನ ಜಾವ 1.40ರ ಹೊತ್ತಿಗೆ ಎರಡು ಬಾಂಬ್‌ ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ ದಾಳಿಗಳು ನಡೆದಿವೆ. ಇಬ್ಬರು ಯೋಧರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಭಾರಿ ಭದ್ರತೆಯ ತಾಂತ್ರಿಕ ಪ್ರದೇಶದ ಒಂದಸ್ತಿನ ಕಟ್ಟಡದ ಚಾವಣಿಯನ್ನು ಸೀಳಿ ಮೊದಲ ಬಾಂಬ್‌…

ಆಳಾಗಿ ದುಡಿ,ಅರಸನಾಗಿ ಉಣ್ಣು

ಡಾ.ಆರೂಢಭಾರತೀ ಸ್ವಾಮೀಜಿ ‌‌         ಸಿದ್ಧಸೂಕ್ತಿ : ಆಳಾಗಿ ದುಡಿ, ಅರಸನಾಗಿ ಉಣ್ಣು. ಸೇವಕ ಮಂತ್ರಿ ಯಾರೇ ಇರಲಿ, ದುಡಿಮೆ ಬದುಕಿಗೆ ಶೋಭೆ! ದುಡಿಸಿಕೊಳ್ಳುವವರು ದುಡಿಯಬಾರದು, ಅದು ತಮ್ಮ ಗೌರವಕ್ಕೆ ಧಕ್ಕೆ ಎಂದು ಭಾವಿಪರು ಹಲವರು. ಅನಿವಾರ್ಯತೆ ಇಲ್ಲದೆಯೂ ಮನೆಗೆಲಸದಾಕೆ! ತಾನುಂಡ ತಟ್ಟೆ, ಉಟ್ಟ ಬಟ್ಟೆ, ತೊಳೆಯುವುದವಮಾನ! ಮಲಗೇಳುವ ಹಾಸಿಗೆ ಹಾಸಿ ಮಡಚಿ ಸುತ್ತಲು, ಇರುವ ನೆಲ ಶುಚಿಗೊಳಿಸಲು, ತನ್ನದೇ ಹಸು ಎಮ್ಮೆ ಎತ್ತುಗಳ ಶೆಗಣಿ ಎತ್ತಿ ಮೈತೊಳೆದು ಮೇವು ನೀರುಣಿಸಲು ಕೆಲಸದಾಳೇ…

Girl in a jacket