ಹಳ್ಳಿಹುಡುಗ ರಾಷ್ಟ್ರಪತಿ ಹುದ್ದೆಗೇರಿದ್ದೇನೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣ: ಕೋವಿಂದ್
ಕಾನ್ಪುರ,ಜೂ,27:ಇಂಥ ಚಿಕ್ಕ ಹಳ್ಳಿಯಲ್ಲಿ ಜನಸಿದನಾನು ಈ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ ಎಂದು ಕನಸಲ್ಲೂ ಕಂಡಿರಲಿಲ್ಲ ಇದಕ್ಕೆ ಈ ದೇಶದ ಪ್ರಜಾಪ್ರಭುತ್ವ ವೇ ಕಾರಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಅವರು ಭಾನುವಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳು, ಕನಸು ಕಂಡಿದ್ದು, ಮುಂದೆ ಬೆಳೆದ ರೀತಿಯನ್ನು ಬಣ್ಣಿಸಿದರು. ನನ್ನಂತಹ ಸಾಮಾನ್ಯ ಹಳ್ಳಿಯಲ್ಲಿ…