ಕೃಷಿ ಸಚಿವರ ವರ್ತನೆಗೆ ಕಾಂಗ್ರೆಸ್ ಟೀಕೆ
ಬೆಂಗಳೂರು,ಜೂ,24: ಮುಂಗಾರು ಸಮಯದಲ್ಲಿ ಬಿತ್ತನೆ ಬೀಜ ಸಿಗದೆ ರೈತರು ಪರದಾಡುತ್ತಿದ್ದರೆ ಕೃಷಿ ಸಚಿವರು ಮೈಮರೆತು ಮಲಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ ‘ಇಲ್ಲ’ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರು ಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ’…