Girl in a jacket

Daily Archives: June 23, 2021

ವಿದ್ಯಾರ್ಥಿಗಳಿಗೆ ಸ್ಮಾರ್ಟ್ ತರಗತಿಯ ಟ್ಯಾಬ್ಲೆಟ್ ಪಿ.ಸಿ.ವಿತರಣೆ

ಬೆಂಗಳೂರು,ಜೂ,23: ಡಿಜಿಟಲ್ ಕಲಿಕಾ ಯೋಜನೆಯಡಿ 2500 ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರಿ ಕಾಲೇಜುಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳಾಗಿ ಉನ್ನತೀಕರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 6,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗುವುದು ಎಂದರು. 2021-22ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು. ಡಿಜಿಟಲ್ ಕಲಿಕೆ…

ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ನೆರವು ನೀಡಲು ಕೆಯುಡಬ್ಲ್ಯೂಜೆ ತೀರ್ಮಾನ

ಬೆಂಗಳೂರು,ಜೂ,23:ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 10 ಸಾವಿರ ಪರಿಹಾರ ನೀಡಲು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀರ್ಮಾನಿಸಿದೆ. ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ಕಳೆದ ವರ್ಷ ನೀಡಿದಂತೆ ಸರ್ಕಾರದಿಂದ 5ಲಕ್ಷ‌ರೂ ನೆರವು ಕೊಡಿಸಲು ನಿರ್ಣಯಿಸಲಾಗಿದೆ. ಪತ್ರಕರ್ತರ ಕುಟುಂಬಕ್ಕೆ ಪಡಿತರ ಕಿಟ್ ಕೊಡಿಸಲು ತೀರ್ಮಾನಿಸಲಾಗಿದೆ.ಬೆಂಗಳೂರಿನಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶೀಘ್ರವಾಗಿ ಶಂಕುಸ್ಥಾಪನೆ ಮಾಡಿಸಲು…

ಕೊರೊನಾ ಕಾಲದ ಹೋಟೆಲ್- ರೆಸಾರ್ಟ್ ನ ವಿದ್ಯುತ್,ನೀರು ಶುಲ್ಕ ಮನ್ನಾ ಮಾಡಲು ಸಿಎಂಗೆ ಸಿದ್ದು ಪತ್ರ

ಬೆಂಗಳೂರು ,ಜೂ23: ಹೋಟೆಲ್-ರೆಸಾರ್ಟ್-ವಸತಿಗೃಹಗಳ ಕೊರೋನಾ ಕಾಲದ ವಿದ್ಯುತ್, ನೀರಿನ ಶುಲ್ಕವನ್ನು ಮನ್ನಾ ಮಾಡುವುದು ಸೇರಿದಂತೆ ಈ ಉದ್ಯಮ ನೆಲಕಚ್ಚದಂತೆ ಅಗತ್ಯ ನೆರವನ್ನು ನೀಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿದ್ದು,ಕರ್ನಾಟಕ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರು, ದೀಪಾಲಂಕಾರದ ಕೆಲಸಗಾರರು, ಫೋಟೋಗ್ರಾಫರ್ ಗಳು ಸೇರಿ ಇನ್ನಿತರೆ ನಾನಾ ಜನ ಸಮುದಾಯಗಳು ಪಡುತ್ತಿರುವ ಕಷ್ಟ ಕಣ್ಣಿಗೆ ಬಿದ್ದಿಲ್ಲ.ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹೋಟೆಲ್‍ಗಳು…

ಸ್ವಂತ ಮಕ್ಕಳ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಬಂಧನ

ಬೆಂಗಳೂರು ,ಜೂ, ೨೩; ಮಲತಾಯಿ ಮಾತು ಕೇಳಿ ಮೂವರು ಮಕ್ಕಳ ಮೇಲೆ ತಂದೆಯೇ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ತಂದೆಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೆಲ್ವಾ ಕ್ರೂಸರ್ ಚಾಲಕನಾಗಿದ್ದು. ಆತನ ಎರಡನೇ ಹೆಂಡತಿ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನೋವನ್ನು ತಡೆಯಲಾರದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ.…

ಸಿಂಧೂರಿಗೆ ಹಿನ್ನೆಡೆ-ಅನುಮತಿ ಇಲ್ಲದೆ ಈಜು ಕೊಳ ನಿರ್ಮಾಣ

ಬೆಂಗಳೂರು,ಜೂ,೨೩: ಸಂಸದ ಪ್ರತಾಪ್ ಸಿಂಹ ಎತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅನುಮತಿ ಇಲ್ಲದೆ ಈಜುಕೊಳ ನಿರ್ಮಿಸಿದ್ದರು ಎನ್ನುವ ಅಂಶ ಈಗ ತನಿಖಾ ವರದಿಯಿಂದ ಗೊತ್ತಾಗಿದೆ. ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಹೇಳಿದೆ. ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೆ ೩೨…

ಆಟ ಆಡಿ ಪಾಠ ಕಲಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಆಟ ಆಡಿ ಪಾಠ ಕಲಿ. ವ್ಯಕ್ತಿ ಸದಾ ಬೆಳೆಯಬೇಕು. ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ ನೈತಿಕ ಬೆಳವಣಿಗೆಯೂ ಆಗಬೇಕು. ದೇಹಬೆಳವಣಿಗೆಗೆ ಆಹಾರವಷ್ಟೇ ಸಾಲದು. ದೈಹಿಕ ಚಟುವಟಿಕೆ ಆಹಾರ ಜೀರ್ಣ ಮಾಡಿ ದೇಹದ ಒಳಹೊರಗನ್ನು ಬೆಳೆಸುವುದು. ಆಟೋಟಗಳು ದೈಹಿಕ ಚಟುವಟಿಕೆ ನೀಡಿ ಆರೋಗ್ಯ ನೀಡುವವು,ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವವು, ಪಾಠ ಕಲಿಸುವವು! ಆಟ ಪ್ರಾಯೋಗಿಕ! ಅದು ಬೌದ್ಧಿಕ ಜ್ಞಾನ ವೃದ್ಧಿಸುವುದು, ಗಟ್ಟಿಗೊಳಿಸುವುದು.ಓದಿನಲ್ಲೂ ಪೈಪೋಟಿ ಹುಟ್ಟಿಸುವುದು! ಬದುಕೇ ನಿಜ ಆಟ. ಬದುಕಾಟ…

Girl in a jacket