Girl in a jacket

Daily Archives: June 22, 2021

ನ ಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ

ಮುಂಬೈಜೂ,೨೨: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ.ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್‌ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ ವಕೀಲರು ತಿಳಿಸಿದ್ದಾರೆನಕಲಿ ಟಿಆರ್‌ಪಿ ಹಗರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ…

ಶಿವಣ್ಣ ನಟನೆಯ ಭಜರಂಗಿ-೨ ಚಿತ್ರೀಕರಣ ಆರಂಭ

ಲಾಕ್ ಡೌನ್‌ನಿಂದ ಹಲವಾರು ಚಿತ್ರಗಳ ಶೂಟಿಂಗ್ ಮತ್ತು ಬಿಡುಗಡೆಯನ್ನು ಮುಂದೂಡಿದ್ದವು ಆನ್‌ಲಾಕ್ ಬೆನ್ನಲ್ಲೆ ಈಗ ನಿಧಾನವಾಗಿ ಹಲವು ಸಿನಿಮಾ ತಯಾರಕರು ಅರ್ಧಕ್ಕೆ ನಿಂತಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ ಎ ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-೨ ಸಿನಿಮಾ ಶೇ.೬೦ ರಷ್ಟು ಪೂರ್ಣಗೊಂಡಿದ್ದು ಚಿತ್ರದ ಶೂಟಿಂಗ್ ಮುಂದುವರಿಸಲು ತಯಾರಾಗಿದ್ದಾರೆ. ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದು ಉಳಿದ ಶೇ.೪೦ ರಷ್ಟು ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ, ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ ಕೆಲಸ ಪುನಾರಂಭಿಸಲಿದ್ದೇವೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ. ಇಂದಿನಿಂದ…

೨೫ ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಒದಗಿಸಲು ಸಿಎಂ ಸೂಚನೆ

ಪ್ರತಿಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಿಸುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ೨೫ ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಒದಿಸುವ ಕುರಿತು ಇಂದು ನಡೆದ ಸಭೆಯಲ್ಲಿ ಕೂಡಲೇ ನೀರು ಒದಗಿಸುವಂತೆ ಅಧಿಕಾರಿಗೆ ಸಿಎಂ ಸೂಚಿಸಿದ್ದಾರೆ. ಬೆಂಗಳೂರು, ಜೂ.೨೨: ಜಲಜೀವನ್ ಮಿಷನ್ ಯೋಜನೆಯಡಿ ೨೫ಲಕ್ಷ ಗ್ರಾಮೀಣಭಾಗದ ಮನೆಗಳಿಗೆ ಕುಡಿಯುವ ನೀರು ಬದಗಿಸುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು,…

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ. ನೇರಳೆ ಹಣ್ಣಿನ ರಾಶಿಯ ಬಗ್ಗೆ ಆಡಿದ ಸಿದ್ಧನ ಮಾತು, ಹುಡುಗರ ಜ್ಞಾನದ ಕಣ್ಣನ್ನು ತೆರೆಸಿತು! ಈಶನನ್ನು ,ಈಶರೂಪಿ ಸಿದ್ಧನನ್ನು ಮರೆತಿದ್ದಕ್ಕೆ ಮರುಕಪಟ್ಟರು. ” ತಾವು ತಪ್ಪು ಮಾಡಿರುವುದರಿಂದ ಇನ್ನು ಹಣ್ಣು ತಿನ್ನುವುದು ಬೇಡ, ಇವುಗಳನ್ನು ಇಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗೋಣ” – ಎಂದರು. ಆಗ ಸಿದ್ಧ ಹೇಳಿದನು; ” ಹಣ್ಣು ಬಿಡಬಹುದು, ಆದರೆ ಅವುಗಳನ್ನು ನೋಡುವ ಕಣ್ಣುಗಳನ್ನು ಬಿಡಲಾಗದು”. ಹಣ್ಣು ಹೆಣ್ಣು ಗಂಡು ಹೊನ್ನು ಮಣ್ಣು ಮತ್ತೊಂದು ಇವೆಲ್ಲ ವಿಷಯಗಳು . ಈ ಎಲ್ಲಾ ಪ್ರಾಪಂಚಿಕ…

ಪ್ರಕೃತಿ,ಮಾನವಸಂಘರ್ಷ ಕುರಿತ ಹೊಸ ಚಿತ್ರ

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಕುರಿತ ಕತೆಯೊಂದನ್ನು ರಿಷಿಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ.ಹಾಗಂತ ಟ್ವೀಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಮತ್ತೊಂದು ಹೊಸ ಚಿತ್ರ ಮಾಡುತ್ತಿದ್ದೆನೆ ನಿಮ್ಮ ಪ್ರೀತಿ,ವಿಶ್ವಾಸ ಹಾರೈಕೆ ಹೀಗೆಯೇ ಇರಲಿ ಎಂದು ಅವರು ಕೋರಿಕೊಂಡಿದ್ದಾರೆ ಕೋವಿಡ್ ಎರಡನೇ ಅಲೆಯ ವೇಳೆ ನನ್ನ ಊರಿನಲ್ಲಿ ನಾನು ಕ್ಯಾಂಪಿಂಗ್ ಮಾಡುವಾಗ ಹೊಳೆದ ಕಥೆ ಇದಾಗಿದೆ, ಶೀಘ್ರದಲ್ಲೆ ಕಥೆಯ ಬಗ್ಗೆ ಅಧಿಕೃತವಾಗಿ ಹೆಚ್ಚಿನ ವಿವರ ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಪ್ಲಾನ್ ಮಾಡಿದ್ದಾರೆ.,…

ಮೆಟ್ರೋದಲ್ಲಿ ಜುಲೈನಿಂದ ಟೋಕನ್ ವ್ಯವಸ್ಥೆ ಜಾರಿ?

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು ಈಗ ಜುಲೈತಿಂಗಳಲ್ಲಿ ಮೆಟ್ರೋ ಟೋಕನ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸರ್ಕಾರ ಹೇಳಿದೆ ಬೆಂಗಳೂರು, ಜೂ, ೨೨;ಕೊರೊನಾ ಒಂದನೇ ಅಲೆಯಿಂದ ಮೆಟ್ರೋ ಪ್ರಯಾಣಿಕರಿಗೆ ಟೋಕನ್ ವ್ಯವಸ್ಥೆ ಇಲ್ಲದೆ ಸಂಚಾರಕ್ಕೆ ತೊಂದರೆಯಾಗಿದ್ದು ಮುಂದಿನ ಮಾರ್ಗಸೂಚಿ ಅನ್ವಯ ಬಹುತೇಕ ಅಥವ ಜುಲೈ ಒಂದರಿಂದ ಟೋಕನ್ ವ್ಯವಸ್ಥೆಯನ್ನು ಕಲ್ಪಿಸುವ ಸಾದ್ಯತೆಗಳಿವೆ ಎಂದು ಸರ್ಕಾರ ಹೇಳಿದೆ. ಕಳೆದ ವರ್ಷದ ಲಾಕ್ ಡೌನ್ ನಂತರ ಕೇವಲ ಮೆಟ್ರೋ ಕಾರ್ಡ್ ದಾರರಿಗೆ…

ಶ್ರೀ ಮೈಲಾರಲಿಂಗೇಶ್ವರ ಕಾರ್ಣೀಕದ ಗೊರವಯ್ಯ ಮಾಲತೇಶಪ್ಪ ನಿಧನ

ಹೂವಿನ ಹಡಗಲಿ,ಜೂ,22: ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗಿನಜಾವ ನಿಧನರಾದರು. 31 ವರ್ಷ ಕಾಲ ಕಾರ್ಣಿಕ ನುಡಿದಿದ್ದ ಮಾಲತೇಶಪ್ಪ ಅವರು ಕೆಲ ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಸಂಕಷ್ಟದಲ್ಲಿದ್ದ ಗೊರವಯ್ಯ ಮಾಲತೇಶಪ್ಪ ಅವರಿಗೆ ಮನೆ ನಿರ್ಮಿಸಿಕೊಡಲು ನಾಡಿನ ಜನರು ಸಹಾಯಹಸ್ತ ಚಾಚಿದ್ದರು. ಆದರೆ ಮನೆ ನಿರ್ಮಾಣ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಮಾಲತೇಶಪ್ಪ ನಿಧನಕ್ಕೆ ನಾಡಿನ ಹಲವಾರು ಮಠಾಧೀಶರು,ಸ್ವಾಮೀಜಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೋವಿಡ್ ಲಸಿಕೆ ಪಡೆದುಕೊಳ್ಳಲು ಸಲಹೆ : ಅನಿತಾ ಕುಮಾರ್ ಸ್ವಾಮಿ

ರಾಮನಗರ, ಜೂ, 22: ಲಸಿಕೆ ತಗೆದುಕೊಳ್ಳುವುದರಿಂದ ಕೋವಿಡ್ ಬಂದರು ಸಹ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ನಿಯಂತ್ರಿಸುತ್ತದೆ. ರಾಮನಗರ ಜಿಲ್ಲೆಯ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಿ ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಿ ಎಂದು ರಾಮನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರ್ ಸ್ವಾಮಿ ಅವರು ತಿಳಿಸಿದ್ದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ…

ಶಾಲೆ ಆರಂಭ ಕುರಿತ ವರದಿ ಸಲ್ಲಿಸಿದ ತಜ್ಞರ ಸಮಿತಿ

ಸರ್ಕಾರ ಆಯಾ ಪ್ರದೇಶದಲ್ಲಿ ಸುರಕ್ಷತೆ ಬಗ್ಗೆ ಅರಿತು ಸ್ಥಳೀಯವಾಗಿ ನಿರ್ಧಾರ ಮಾಡಬೆಕು ಎಂದಿರುವ ಅರು ಕೊರೊನಾ ಇಳಿಮುಖವಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಏಕಾ ಏಕಿ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂದು ವರದಿಯಲ್ಲಿ ತಿಳಿಸಿದೆ ಬೆಂಗಳೂರು,ಜೂ.೨೨:ಮಕ್ಕಳಿಗೆ ಶಾಲೆ ಪುನರಾರಂಭ ಮಾಡುವುದರಿಂದ ಉಪಯೋಗ ಮತ್ತು ಸಮಸ್ಯೆ ಎರಡೂ ಇವೆ ಎರಡನ್ನು ಕೂಲಂಕುಷವಾಗಿ ಪರಿಶೀಲಿಸಿ ಶಾಲೆ ಆರಂಭ ಮಾಡಬೇಕೆ ಬೇಡವೇ ಎನ್ನುವ ಕುರಿತು ನಿರ್ಧಾರ ಮಾಡಬಹುದು. ಇದು ಡಾ.ದೇವಿಶೆಟ್ಟಿ ನೇತೃತ್ವದ ಮೂರನೇ ಅಲೆ ಸಿದ್ದತೆ ಕುರಿತು ರಚಿಸಿರುವ ಉನ್ನತ ಮಟ್ಟದ…

Girl in a jacket