ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ;೨೦ ಲಾರಿಗಳ ವಶ
ಬಳ್ಳಾರಿ,ಜೂ,೨೦: ಮತ್ತೇ ಗಣಿನಾಡಿನಲ್ಲಿ ಅಕ್ರಮ ಗಣಿಗಾರಿಕೆ ಶುರುವಾಗಿದೆ. ಈ ಸಂಬಂಧ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಅಕ್ರಮ ಅದಿರು ಸಾಗಾಟದ ೨೦ಕ್ಕೂ ಹೆಚ್ಚು ಲಾರಿಗಳನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಗಣಿನಾಡು ಬಳ್ಳಾರಿ ಅಂದರೆ ಅಕ್ರಮ ಗಣಿಗಾರಿಕೆ, ಅಕ್ರಮ ಗಣಿ ಸಾಗಾಟ ಎನ್ನುವುದು ಇಡೀ ದೇಶಕ್ಕೇ ಸಾರಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಬಿಐ ತನಿಖೆ ಆರಂಭಿಸಿದ ಬಳಿಕ ಸುಪ್ರೀಂ ಕೋರ್ಟ್ ಗಣಿ ರಪ್ತಿಗೆ ನಿಷೇಧ ಹೇರಿತ್ತು. ಪ್ಲಾಂಟ್ ಇದ್ದವರಿಗೆ ಗಣಿಗಾರಿಕೆ ಮಾತ್ರ…