ಮನೆಯಲ್ಲೇ ಯೋಗ ದಿನ ಆಚರಿಸಿ:ಕೆ.ಸುಧಾಕರ್
ಬೆಂಗಳೂರು, ಜೂ, 19:ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನ ಆಚರಿಸುತ್ತಿದ್ದು, ಈ ಬಾರಿ ಎಲ್ಲರೂ ಮನೆಯಲ್ಲೇ ಇದ್ದು ಆಚರಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜೂನ್ 21 ರಂದು ಯೋಗ ದಿನವನ್ನು ಆನ್ ಲೈನ್ ನಲ್ಲೇ ಆಚರಿಸಲಾಗುತ್ತಿದೆ. ಬಿ ವಿತ್ ಯೋಗ ಬಿ ಅಟ್ ಹೋಮ್ ಮತ್ತು ಯೋಗ ಫಾರ್ ವೆಲ್ ನೆಸ್ ಎಂಬ ಘೋಷವಾಕ್ಯದಡಿ ಯೋಗ ದಿನ ಆಚರಿಸಲಾಗುತ್ತಿದೆ.…